ವೈಯಕ್ತಿಕ ಮಾಹಿತಿಯ ಸಂಗ್ರಹಣೆ ಮತ್ತು ಬಳಕೆ (ಕಡ್ಡಾಯ)
ಗ್ರಾಹಕ ಸೇವೆಗಳಿಗೆ ಸಂಬಂಧಿಸಿದಂತೆ, ನೀವು ನಮ್ಮ ಸೇವೆಗಳನ್ನು ಬಳಸುವಾಗ OpenAI ಕೆಳಗೆ ವಿವರಿಸಿದ ರೀತಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತದೆ ಮತ್ತು ಬಳಸುತ್ತದೆ. ನಮ್ಮ API ಯಂತಹ ವ್ಯವಹಾರ ಸೇವೆಗಳ ಗ್ರಾಹಕರ ಪರವಾಗಿ ನಾವು ಪ್ರಕ್ರಿಯೆಗೊಳಿಸುವ ವಿಷಯದ ಬಳಕೆಯು, ಆ ಸೇವೆಗಳಿಗೆ ಅನ್ವಯಿಸುವ ನಮ್ಮ ಗ್ರಾಹಕ ಒಪ್ಪಂದಗಳಿಗೆ ಒಳಪಟ್ಟಿರುತ್ತದೆ. ನಮ್ಮ ಉದ್ಯಮ ಗೌಪ್ಯತೆ ಪುಟವನ್ನು ನೋಡಿ.
ಸಂಗ್ರಹಿಸಬೇಕಾದ ವೈಯಕ್ತಿಕ ಮಾಹಿತಿಯ ವಿವರಗಳು:
ನಮ್ಮ ಸೇವೆಗಳನ್ನು ಬಳಸಲು ಖಾತೆ ರಚಿಸಿದಾಗ ಅಥವಾ ನಮ್ಮೊಂದಿಗೆ ಸಂವಹನ ನಡೆಸಿದಾಗ ನೀವು ಒದಗಿಸುವ ವೈಯಕ್ತಿಕ ಮಾಹಿತಿ:
ಖಾತೆ ಮಾಹಿತಿ: ನೀವು ನಮ್ಮಲ್ಲಿ ಖಾತೆ ರಚಿಸಿದಾಗ, ನಿಮ್ಮ ಹೆಸರು, ಸಂಪರ್ಕ ಮಾಹಿತಿ, ಖಾತೆಯ ಪ್ರವೇಶ ರುಜುವಾತುಗಳು, ಜನ್ಮ ದಿನಾಂಕ, ಪಾವತಿ ಮಾಹಿತಿ ಮತ್ತು ವಹಿವಾಟಿನ ಇತಿಹಾಸ ಸೇರಿದಂತೆ ನಿಮ್ಮ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ (ಒಟ್ಟಾಗಿ, “ಖಾತೆ ಮಾಹಿತಿ”). ನಮ್ಮ ಕೆಲವು ಸೇವೆಗಳು ನಿಮ್ಮ ಖಾತೆ ಮಾಹಿತಿಯ ಭಾಗವಾಗಿ ಪರಿಚಯಚಿತ್ರ, ಬಳಕೆದಾರ ಹೆಸರು ಅಥವಾ ಇತರ ಮಾಹಿತಿಯನ್ನು ಅಪ್ಲೋಡ್ ಮಾಡಲು ಸಹ ಅವಕಾಶ ನೀಡಬಹುದು.
ಬಳಕೆದಾರರ ವಿಷಯ: ನಮ್ಮ ಸೇವೆಗಳಿಗೆ ನೀವು ನೀಡುವ ಒಳಾಂಶದಲ್ಲಿರುವ ವೈಯಕ್ತಿಕ ಮಾಹಿತಿಯನ್ನು (“ವಿಷಯ”) ನಾವು ಸಂಗ್ರಹಿಸುತ್ತೇವೆ. ನೀವು ಬಳಸುವ ವೈಶಿಷ್ಟ್ಯಗಳಿಗೆ ಅನುಗುಣವಾಗಿ, ಇದರಲ್ಲಿ ನಿಮ್ಮ ಸೂಚನೆಗಳು ಮತ್ತು ನೀವು ಅಪ್ಲೋಡ್ ಮಾಡುವ ಕಡತಗಳು, ಚಿತ್ರಗಳು, ಧ್ವನಿ ಮತ್ತು ವೀಡಿಯೊ, Sora ಪಾತ್ರಗಳಂತಹ ಇತರ ವಿಷಯ ಹಾಗೂ ಜೋಡಿಸಿದ ಸೇವೆಗಳಿಂದ ಬರುವ ದತ್ತಾಂಶ ಸೇರಿರುತ್ತದೆ. ನಮ್ಮ ಕೆಲವು ಸೇವೆಗಳು ಪ್ರಕಟಣೆ ಹಾಕುವುದು, ಪ್ರತಿಕ್ರಿಯಿಸುವುದು ಅಥವಾ ಸಂದೇಶ ಕಳುಹಿಸುವಂತಹ ವಿಧಾನಗಳಿಂದ ಇತರ ಬಳಕೆದಾರರೊಂದಿಗೆ ಸಂವಹನ ನಡೆಸಲು ಅವಕಾಶ ನೀಡುತ್ತವೆ. ಆ ಸಂವಹನಗಳನ್ನೂ ನಾವು ವಿಷಯವೆಂದು ಪರಿಗಣಿಸುತ್ತೇವೆ.
ಸಂವಹನ ಮಾಹಿತಿ: ಇಮೇಲ್ ಅಥವಾ ಸಾಮಾಜಿಕ ಮಾಧ್ಯಮ ತಾಣಗಳಲ್ಲಿನ ನಮ್ಮ ಪುಟಗಳ ಮೂಲಕ ನೀವು ನಮ್ಮೊಂದಿಗೆ ಸಂವಹನ ನಡೆಸಿದರೆ, ನಿಮ್ಮ ಹೆಸರು, ಸಂಪರ್ಕ ಮಾಹಿತಿ ಮತ್ತು ನೀವು ಕಳುಹಿಸುವ ಸಂದೇಶಗಳ ವಿಷಯದಂತಹ ವೈಯಕ್ತಿಕ ಮಾಹಿತಿಯನ್ನು (“ಸಂವಹನ ಮಾಹಿತಿ”) ನಾವು ಸಂಗ್ರಹಿಸಬಹುದು.
ಸಂಪರ್ಕ ದತ್ತಾಂಶ: ನಿಮ್ಮ ಸಾಧನದ ಸಂಪರ್ಕಗಳನ್ನು ಜೋಡಿಸಲು ನೀವು ಆಯ್ಕೆ ಮಾಡಿದರೆ, ನಿಮ್ಮ ಸಾಧನದ ವಿಳಾಸ ಪುಸ್ತಕಗಳಲ್ಲಿನ ಮಾಹಿತಿಯನ್ನು ನಾವು ಅಪ್ಲೋಡ್ ಮಾಡುತ್ತೇವೆ ಮತ್ತು ನಿಮ್ಮ ಸಂಪರ್ಕಗಳಲ್ಲಿ ಯಾರು ನಮ್ಮ ಸೇವೆಗಳನ್ನೂ ಬಳಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸುತ್ತೇವೆ. ನಿಮ್ಮ ಸಂಪರ್ಕಗಳಲ್ಲಿ ಯಾರಾದರೂ ಇನ್ನೂ ನಮ್ಮ ಸೇವೆಗಳನ್ನು ಬಳಸದಿದ್ದರೆ, ಅವರು ನಂತರ ನಮ್ಮ ಸೇವೆಗಳಿಗೆ ನೋಂದಾಯಿಸಿಕೊಂಡಾಗ ನಾವು ನಿಮಗೆ ತಿಳಿಸುತ್ತೇವೆ.ನಿಮ್ಮ ಸಂಪರ್ಕಗಳನ್ನು ಜೋಡಿಸುವ ಬಗ್ಗೆ ಮತ್ತು ನಮ್ಮ ಸೇವೆಗಳನ್ನು ಬಳಸದವರ ಅಪ್ಲೋಡ್ ಮಾಡಿದ ಸಂಪರ್ಕ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ ಎಂಬ ಬಗ್ಗೆ ಇನ್ನಷ್ಟು ತಿಳಿಯಿರಿ.
ನೀವು ಒದಗಿಸುವ ಇತರ ಮಾಹಿತಿ: ನಮ್ಮ ಕಾರ್ಯಕ್ರಮಗಳು ಅಥವಾ ಸಮೀಕ್ಷೆಗಳಲ್ಲಿ ಭಾಗವಹಿಸುವಾಗ ನೀವು ನೀಡುವ ಉತ್ತರಗಳನ್ನು ಮತ್ತು ನಿಮ್ಮ ಗುರುತು ಅಥವಾ ವಯಸ್ಸನ್ನು ದೃಢೀಕರಿಸಲು ನಮಗೆ ಅಥವಾ ನಮ್ಮ ಪರವಾಗಿ ಕಾರ್ಯನಿರ್ವಹಿಸುವ ಸೇವಾದಾರರಿಗೆ ನೀವು ಒದಗಿಸುವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.
ನೀವು ಸೇವೆಗಳಿಗೆ ಭೇಟಿ ನೀಡಿದಾಗ, ಅವುಗಳನ್ನು ಬಳಸಿದಾಗ ಅಥವಾ ಅವುಗಳೊಂದಿಗೆ ಸಂವಹನ ನಡೆಸಿದಾಗ ನಮಗೆ ದೊರೆಯುವ ವೈಯಕ್ತಿಕ ಮಾಹಿತಿ:
ಚಟುವಟಿಕೆ ದಾಖಲೆ ದತ್ತಾಂಶ: ನೀವು ನಮ್ಮ ಸೇವೆಗಳನ್ನು ಬಳಸುವಾಗ ನಿಮ್ಮ ಬ್ರೌಸರ್ ಅಥವಾ ಸಾಧನ ಸ್ವಯಂಚಾಲಿತವಾಗಿ ಕಳುಹಿಸುವ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಚಟುವಟಿಕೆ ದಾಖಲೆ ದತ್ತಾಂಶದಲ್ಲಿ ನಿಮ್ಮ ಅಂತರ್ಜಾಲ ಪ್ರೋಟೋಕಾಲ್ ವಿಳಾಸ, ಬ್ರೌಸರ್ ಪ್ರಕಾರ ಮತ್ತು ಸೆಟ್ಟಿಂಗ್ಗಳು, ನಿಮ್ಮ ವಿನಂತಿಯ ದಿನಾಂಕ ಮತ್ತು ಸಮಯ ಹಾಗೂ ನಮ್ಮ ಸೇವೆಗಳೊಂದಿಗೆ ನೀವು ಸಂವಹನ ನಡೆಸುವ ವಿಧಾನ ಸೇರಿರುತ್ತದೆ.
ಬಳಕೆ ದತ್ತಾಂಶ: ನೀವು ವೀಕ್ಷಿಸುವ ಅಥವಾ ಸಂವಹನ ನಡೆಸುವ ವಿಷಯದ ಪ್ರಕಾರಗಳು, ಬಳಸುವ ವೈಶಿಷ್ಟ್ಯಗಳು ಮತ್ತು ಕೈಗೊಳ್ಳುವ ಕ್ರಮಗಳಂತಹ ನಿಮ್ಮ ಸೇವಾ ಬಳಕೆಯ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಜೊತೆಗೆ ನಿಮ್ಮ ಸಮಯ ವಲಯ, ದೇಶ, ಪ್ರವೇಶದ ದಿನಾಂಕಗಳು ಮತ್ತು ಸಮಯಗಳು, ನಿಮ್ಮ ಸಾಧನ ಸೇವೆಗಳನ್ನು ಪ್ರವೇಶಿಸುವ ಸಾಮಾನ್ಯ ಪ್ರದೇಶ, ಬಳಕೆದಾರ ಏಜೆಂಟ್ ಮತ್ತು ಅದರ ಆವೃತ್ತಿ, ಗಣಕ ಅಥವಾ ಮೊಬೈಲ್ ಸಾಧನದ ಪ್ರಕಾರ ಹಾಗೂ ನಿಮ್ಮ ಗಣಕದ ಸಂಪರ್ಕದ ಮಾಹಿತಿಯನ್ನೂ ಸಂಗ್ರಹಿಸುತ್ತೇವೆ. ನೀವು Atlas ಬ್ರೌಸರ್ ಬಳಸಿದರೆ, ನಿಮ್ಮ ನಿಯಂತ್ರಣಗಳು ಮತ್ತು ಸೇವೆಯ ಬಳಕೆಗೆ ಅನುಗುಣವಾಗಿ ನಿಮ್ಮ ಬ್ರೌಸರ್ ದತ್ತಾಂಶವನ್ನೂ ನಾವು ಸಂಗ್ರಹಿಸಬಹುದು.
ಜಾಹೀರಾತು ದತ್ತಾಂಶ: ಉಚಿತ ಮತ್ತು Go ಬಳಕೆದಾರರಿಗೆ ಸಂಬಂಧಿಸಿದಂತೆ, ನಿಮ್ಮ ಆಯ್ಕೆಗಳು ಮತ್ತು ನಿಯಂತ್ರಣಗಳಿಗೆ ಒಳಪಟ್ಟು, ನೀವು ವೀಕ್ಷಿಸುವ ಅಥವಾ ಸಂವಹನ ನಡೆಸುವ ಜಾಹೀರಾತು ವಿಷಯದ ಪ್ರಕಾರಗಳಂತಹ ನಿಮ್ಮ ಜಾಹೀರಾತು ಇತಿಹಾಸ ಮತ್ತು ಆಸಕ್ತಿಗಳ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ.
ಸಾಧನದ ಮಾಹಿತಿ: ಸೇವೆಗಳನ್ನು ಪ್ರವೇಶಿಸಲು ನೀವು ಬಳಸುವ ಸಾಧನದ ಹೆಸರು, ಕಾರ್ಯಾಚರಣಾ ವ್ಯವಸ್ಥೆ, ಸಾಧನದ ಗುರುತುಸೂಚಕಗಳು ಮತ್ತು ನೀವು ಬಳಸುತ್ತಿರುವ ಬ್ರೌಸರ್ನಂತಹ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ. ಸಂಗ್ರಹಿಸುವ ಮಾಹಿತಿಯು ನೀವು ಬಳಸುವ ಸಾಧನದ ಪ್ರಕಾರ ಮತ್ತು ಅದರ ಸೆಟ್ಟಿಂಗ್ಗಳನ್ನು ಅವಲಂಬಿಸಿರಬಹುದು.
ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳು: ನಮ್ಮ ಸೇವೆಗಳನ್ನು ನಡೆಸಲು ಮತ್ತು ನಿರ್ವಹಿಸಲು ಹಾಗೂ ನಿಮ್ಮ ಅನುಭವವನ್ನು ಸುಧಾರಿಸಲು ನಾವು ಕುಕೀಗಳು ಮತ್ತು ಅಂತಹುದೇ ತಂತ್ರಜ್ಞಾನಗಳನ್ನು ಬಳಸುತ್ತೇವೆ. ಪ್ರೈವಸಿ ಪಾಲಿಸಿಯಲ್ಲಿ ವಿವರಿಸಿರುವ ಕೆಲವು ಮಾಹಿತಿಯನ್ನು ನಾವು ಕುಕೀಗಳ ಮೂಲಕ ಸಂಗ್ರಹಿಸುತ್ತೇವೆ. ಉದಾಹರಣೆಗೆ, ನೀವು ಲಾಗಿನ್ ಆಗಿರದಿದ್ದರೆ ವಿವಿಧ ಬ್ರೌಸಿಂಗ್ ಅಧಿವೇಶನಗಳ ನಡುವೆ ನಿಮ್ಮ ಆದ್ಯತೆಗಳನ್ನು ಉಳಿಸಿಕೊಳ್ಳಲು ಅಥವಾ ದೃಢೀಕರಣ ಮತ್ತು ಗ್ರಾಹಕ ಬೆಂಬಲಕ್ಕೆ ನೆರವಾಗಲು ಹೀಗೆ ಮಾಡುತ್ತೇವೆ. ನಾವು ಕುಕೀಗಳನ್ನು ಬಳಸುವ ಕುರಿತು ವಿವರಗಳಿಗಾಗಿ, ದಯವಿಟ್ಟು ನಮ್ಮ ಕುಕೀ ಸೂಚನೆಯನ್ನು ಓದಿ.
ಸಂಗ್ರಹಣೆ ಮತ್ತು ಬಳಕೆಯ ಉದ್ದೇಶ:
ನಮ್ಮ ಸೇವೆಗಳನ್ನು ಒದಗಿಸಲು, ವಿಶ್ಲೇಷಿಸಲು ಮತ್ತು ನಿರ್ವಹಿಸಲು, ಉದಾಹರಣೆಗೆ ChatGPT ಗೆ ನೀವು ಕೇಳುವ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು;
ನಮ್ಮ ಸೇವೆಗಳನ್ನು ಸುಧಾರಿಸಲು, ಅಭಿವೃದ್ಧಿಪಡಿಸಲು ಮತ್ತು ಸಂಶೋಧನೆ ನಡೆಸಲು, ಉದಾಹರಣೆಗೆ ಉತ್ಪನ್ನದ ಹೊಸ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸಲು;
ನಮ್ಮ ಎಲ್ಲ ಸೇವೆಗಳಲ್ಲಿ ನಿಮ್ಮ ಅನುಭವವನ್ನು ವೈಯಕ್ತೀಕರಿಸಲು ಮತ್ತು ನಿಮ್ಮ ಅಗತ್ಯಗಳಿಗೆ ಹೊಂದಿಸಲು, ಉದಾಹರಣೆಗೆ ನಿಮಗೆ ಹೆಚ್ಚು ಪ್ರಸ್ತುತವಾದ ವಿಷಯವನ್ನು ಒದಗಿಸಲು;
ChatGPT ಯಲ್ಲಿ ನಿಮಗೆ ಜಾಹೀರಾತುಗಳನ್ನು ತೋರಿಸಲು, ಬಳಕೆದಾರರು ಅಂತಹ ಜಾಹೀರಾತುಗಳೊಂದಿಗೆ ಹೇಗೆ ಸಂವಹನ ನಡೆಸುತ್ತಾರೆ ಎಂಬುದನ್ನು ಒಟ್ಟಾರೆ ಮಟ್ಟದಲ್ಲಿ ಅರ್ಥಮಾಡಿಕೊಳ್ಳಲು ಮತ್ತು ಜಾಹೀರಾತುಗಳ ಗುಣಮಟ್ಟವನ್ನು ಸುಧಾರಿಸುವುದಕ್ಕಾಗಿ ನಮ್ಮ ಮಾರುಕಟ್ಟೆ ಪ್ರಚಾರ ಹಾಗೂ ಜಾಹೀರಾತು ಪ್ರಯತ್ನಗಳ ಪರಿಣಾಮಕಾರಿತ್ವವನ್ನು ಅಳೆಯಲು. ChatGPT ಯಲ್ಲಿನ ಜಾಹೀರಾತುಗಳ ಕುರಿತು ಇನ್ನಷ್ಟು ತಿಳಿಯಿರಿ;
ನಿಮ್ಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವುದೂ ಸೇರಿದಂತೆ ನಿಮ್ಮೊಂದಿಗೆ ಸಂವಹನ ನಡೆಸಲು ಮತ್ತು ನಮ್ಮ ಸೇವೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ನಿಮಗೆ ಮಾಹಿತಿ ಕಳುಹಿಸಲು, ಉದಾಹರಣೆಗೆ ಸೇವೆಗಳಲ್ಲಿನ ಬದಲಾವಣೆಗಳು ಅಥವಾ ಸುಧಾರಣೆಗಳ ಬಗ್ಗೆ ತಿಳಿಸಲು;
ನಿಮ್ಮ ಸಂಪರ್ಕಗಳನ್ನು ಜೋಡಿಸಲು ನೀವು ಆಯ್ಕೆ ಮಾಡಿದಾಗ, ಅವುಗಳಲ್ಲಿ ನಮ್ಮ ಸೇವೆಗಳನ್ನು ಬಳಸುವವರನ್ನು ಗುರುತಿಸಲು ಮತ್ತು ಅವರು ನಂತರ ನಮ್ಮ ಸೇವೆಗಳಿಗೆ ಸೇರಿದರೆ ನಿಮಗೆ ತಿಳಿಸಲು;
ನಮ್ಮ ವೇದಿಕೆಗಳಲ್ಲಿ ಸಲ್ಲಿಸಿದ ಅಥವಾ ವಿನಿಮಯ ಮಾಡಿಕೊಂಡ ಯಾವುದೇ ವಿಷಯವನ್ನು ಮೇಲ್ವಿಚಾರಣೆ ಮಾಡುವುದೂ ಸೇರಿದಂತೆ, ವಂಚನೆ, ಕಾನೂನುಬಾಹಿರ ಚಟುವಟಿಕೆ ಅಥವಾ ನಮ್ಮ ಸೇವೆಗಳ ದುರುಪಯೋಗವನ್ನು ತಡೆಯಲು ( ಇಲ್ಲಿ ಇನ್ನಷ್ಟು ತಿಳಿಯಿರಿ); ಮತ್ತು
ಕಾನೂನುಬದ್ಧ ಹೊಣೆಗಾರಿಕೆಗಳನ್ನು ಪಾಲಿಸಲು ಮತ್ತು ನಮ್ಮ ಬಳಕೆದಾರರು, OpenAI ಅಥವಾ ಮೂರನೇ ವ್ಯಕ್ತಿಗಳ ಹಕ್ಕುಗಳು, ಗೌಪ್ಯತೆ, ಸುರಕ್ಷತೆ ಅಥವಾ ಆಸ್ತಿಯನ್ನು ರಕ್ಷಿಸಲು, ಉದಾಹರಣೆಗೆ ನಿಮಗೆ ಅಥವಾ ಇತರರಿಗೆ ಹಾನಿಯಾಗುವುದನ್ನು ತಡೆಯಲು ಅಥವಾ ನಿಮ್ಮ ವಯಸ್ಸಿಗೆ ಸೂಕ್ತವಾದ ಅನುಭವ ನೀಡಲು ನಿಮ್ಮ ವಯಸ್ಸನ್ನು ಅಂದಾಜಿಸಲು.
ಉಳಿಸಿಕೊಳ್ಳುವ ಮತ್ತು ಬಳಸುವ ಅವಧಿ:
ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಿಮಗೆ ನಮ್ಮ ಸೇವೆಗಳನ್ನು ಒದಗಿಸಲು ಅಥವಾ ವಿವಾದಗಳ ಪರಿಹಾರ, ಸುರಕ್ಷತೆ ಮತ್ತು ಭದ್ರತೆ, ನಮ್ಮ ಕಾನೂನುಬದ್ಧ ಹೊಣೆಗಾರಿಕೆಗಳ ಪಾಲನೆಯಂತಹ ಇತರ ನ್ಯಾಯಸಮ್ಮತ ವ್ಯವಹಾರ ಉದ್ದೇಶಗಳಿಗೆ ಅಗತ್ಯವಿರುವಷ್ಟು ಕಾಲ ಮಾತ್ರ ನಾವು ಉಳಿಸಿಕೊಳ್ಳುತ್ತೇವೆ. ವೈಯಕ್ತಿಕ ಮಾಹಿತಿಯನ್ನು ನಾವು ಎಷ್ಟು ಕಾಲ ಉಳಿಸಿಕೊಳ್ಳುತ್ತೇವೆ ಎಂಬುದು ದತ್ತಾಂಶದ ಪ್ರಕಾರ, ಅದನ್ನು ನಾವು ಬಳಸುವ ವಿಧಾನ ಮತ್ತು ಅನೇಕ ಸಂದರ್ಭಗಳಲ್ಲಿ ನಿಮ್ಮ ಸೆಟ್ಟಿಂಗ್ಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ:
ನೀವು ಅಳಿಸುವವರೆಗೆ ನಾವು ಉಳಿಸಿಕೊಳ್ಳುವ ಮಾಹಿತಿ: ನಮ್ಮ ಕೆಲವು ಸೇವೆಗಳಲ್ಲಿ ನಿಮ್ಮ ಖಾತೆಯಲ್ಲಿ ಸಂಗ್ರಹಿಸಿರುವ ವೈಯಕ್ತಿಕ ಮಾಹಿತಿಯನ್ನು ನೀವು ಅಳಿಸಬಹುದು. ಉದಾಹರಣೆಗೆ, ನಿಮ್ಮ ನಿರ್ದಿಷ್ಟ ಅಥವಾ ಎಲ್ಲ ChatGPT ಸಂಭಾಷಣೆಗಳನ್ನು ಅಳಿಸಬಹುದು, ನಿರ್ದಿಷ್ಟ ಉಳಿಸಿದ ನೆನಪುಗಳನ್ನು ಅಳಿಸಬಹುದು ಅಥವಾ ನಿಮ್ಮ ಖಾತೆಯನ್ನು ಅಳಿಸಬಹುದು. ವೈಯಕ್ತಿಕ ಮಾಹಿತಿಯನ್ನು ಅಳಿಸಲು ನೀವು ನಿರ್ಧರಿಸಿದ ಬಳಿಕ, 30 ದಿನಗಳೊಳಗೆ ಅದನ್ನು ನಮ್ಮ ವ್ಯವಸ್ಥೆಗಳಿಂದ ತೆಗೆದುಹಾಕುತ್ತೇವೆ. ಆದರೆ ಕೆಳಗೆ ವಿವರಿಸಿದಂತೆ ಅದನ್ನು ಹೆಚ್ಚು ಕಾಲ ಉಳಿಸಿಕೊಳ್ಳಬೇಕಾದ ಅಗತ್ಯವಿದ್ದರೆ ಅಥವಾ ನಿಮ್ಮ ವಿಷಯವನ್ನು ನಮ್ಮ ಮಾಡೆಲ್ಗಳನ್ನು ಸುಧಾರಿಸಲು ಬಳಸಲು ನೀವು ಅನುಮತಿಸಿದಾಗ ಅದರಿಂದ ಗುರುತಿನ ವಿವರಗಳನ್ನು ಈಗಾಗಲೇ ತೆಗೆದುಹಾಕಿ, ನಿಮ್ಮ ಖಾತೆಯೊಂದಿಗಿನ ಸಂಬಂಧವನ್ನು ಬೇರ್ಪಡಿಸಿದ್ದರೆ ಇದು ಅನ್ವಯಿಸುವುದಿಲ್ಲ.
ನಾವು ಸ್ವಯಂಚಾಲಿತವಾಗಿ ಅಳಿಸುವ ಮಾಹಿತಿ: ಕೆಲವು ಸಂದರ್ಭಗಳಲ್ಲಿ, ವೈಯಕ್ತಿಕ ಮಾಹಿತಿಯನ್ನು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ. ಉದಾಹರಣೆಗೆ, ತಾತ್ಕಾಲಿಕ ಸಂಭಾಷಣೆಗಳನ್ನು 30 ದಿನಗಳೊಳಗೆ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ (ಕೆಳಗೆ ಇನ್ನಷ್ಟು ವಿವರಿಸಿದಂತೆ, ಸುರಕ್ಷತೆ ಅಥವಾ ಕಾನೂನು ಕಾರಣಗಳಿಗಾಗಿ ಅವುಗಳನ್ನು ಉಳಿಸಿಕೊಳ್ಳಬೇಕಾದ ಅಗತ್ಯವಿಲ್ಲದಿದ್ದರೆ). ಹಾಗೆಯೇ, ನೀವು ಅಧಿವೇಶನವನ್ನು ಕೊನೆಗೊಳಿಸಿದ ನಂತರ ನಿಮ್ಮ Atlas ಅಜ್ಞಾತ ಬ್ರೌಸಿಂಗ್ ಇತಿಹಾಸವನ್ನು ಉಳಿಸಲಾಗುವುದಿಲ್ಲ.
ನ್ಯಾಯಸಮ್ಮತ ಭದ್ರತೆ, ಸುರಕ್ಷತೆ ಅಥವಾ ಕಾನೂನು ಕಾರಣಗಳಿಗಾಗಿ ನಾವು ಹೆಚ್ಚು ಕಾಲ ಉಳಿಸಿಕೊಳ್ಳುವ ಮಾಹಿತಿ: ಕೆಲವು ಸಂದರ್ಭಗಳಲ್ಲಿ, ನೀವು ಅಳಿಸಿದ ನಂತರವೂ ವೈಯಕ್ತಿಕ ಮಾಹಿತಿಯನ್ನು ನಾವು ಹೆಚ್ಚು ಕಾಲ ಉಳಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಕಾನೂನಿನ ಪ್ರಕಾರ ಅದು ಅಗತ್ಯವಾಗಿದ್ದಾಗ, ವಂಚನೆ ಮತ್ತು ದುರುಪಯೋಗವನ್ನು ತಡೆಯಲು, ಭದ್ರತಾ ಕಾರಣಗಳಿಗಾಗಿ ಅಥವಾ ಹಣಕಾಸು ದಾಖಲೆಗಳನ್ನು ನಿರ್ವಹಿಸಲು. ಉದಾಹರಣೆಗೆ:
ನಮ್ಮ ಬಳಕೆ ನೀತಿಗಳ ಉಲ್ಲಂಘನೆಯಿಂದಾಗಿ ನಿರ್ದಿಷ್ಟ ವಿಷಯ ಅಥವಾ ನಿಮ್ಮ ಖಾತೆಯನ್ನು ನಿಷೇಧಿಸಿದರೆ, ವಂಚನೆ, ದುರುಪಯೋಗ ಅಥವಾ ನಮ್ಮ ನೀತಿಗಳ ಇತರ ಉಲ್ಲಂಘನೆಗಳಿಂದ ನಮ್ಮ ಸೇವೆಗಳನ್ನು ರಕ್ಷಿಸಲು ನಾವು ಆ ದತ್ತಾಂಶವನ್ನು ಉಳಿಸಿಕೊಳ್ಳಬಹುದು;
ನಿಮ್ಮ ದತ್ತಾಂಶವನ್ನು ಉಳಿಸಿಕೊಳ್ಳಲು ನಾವು ಕಾನೂನುಬದ್ಧವಾಗಿ ಬದ್ಧರಾಗಿದ್ದರೆ (ಉದಾಹರಣೆಗೆ, ನಮಗೆ ಕಾನೂನುಬದ್ಧ ಸಮನ್ಸ್ ಬಂದರೆ), ಸಂಬಂಧಿತ ಕಾನೂನು ಅಥವಾ ನಿಯಂತ್ರಕ ಹೊಣೆಗಾರಿಕೆಯ ಅವಧಿಯವರೆಗೆ ಅದನ್ನು ಉಳಿಸಿಕೊಳ್ಳಬಹುದು;
ನಾವು ಹಣಕಾಸು ವಹಿವಾಟಿನಲ್ಲಿ ಭಾಗಿಯಾಗಿದ್ದಾಗ (ಉದಾಹರಣೆಗೆ, ChatGPT Plus ಅಥವಾ Pro ಖಾತೆಗಾಗಿ ನಿಮ್ಮ ಪಾವತಿಯನ್ನು ಪ್ರಕ್ರಿಯೆಗೊಳಿಸುವಾಗ ಅಥವಾ ChatGPT ಯಲ್ಲಿ ಖರೀದಿಗೆ ನೆರವಾಗುವಾಗ), ಲೆಕ್ಕಪತ್ರ ನಿರ್ವಹಣೆ, ವಿವಾದ ಪರಿಹಾರ ಮತ್ತು ನಿಯಂತ್ರಕ ನಿಯಮಗಳ ಪಾಲನೆಗಾಗಿ ಪಾವತಿ ಮತ್ತು ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನು ಉಳಿಸಿಕೊಳ್ಳಬಹುದು;
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಳಿಸಲು ನೀವು ನಮ್ಮನ್ನು ಕೇಳಿದಾಗ, ನಿಮ್ಮ ಕೋರಿಕೆಯನ್ನು ನಾವು ಪಾಲಿಸಿದ್ದೇವೆ ಎಂದು ಪರಿಶೀಲಿಸಲು ಸಾಧ್ಯವಾಗುವಂತೆ, ಅಳಿಸುವಿಕೆ ಕೋರಿಕೆಯ ಲೆಕ್ಕಪರಿಶೋಧನಾ ದಾಖಲೆಯನ್ನು ಉಳಿಸಿಕೊಳ್ಳುತ್ತೇವೆ.
ಮಾಹಿತಿಯನ್ನು ಉಳಿಸಿಕೊಳ್ಳುವ ಈ ಅವಧಿಗಳನ್ನು ನಿರ್ಧರಿಸುವಾಗ, ನಾವು ಹಲವು ಅಂಶಗಳನ್ನು ಪರಿಗಣಿಸುತ್ತೇವೆ. ಉದಾಹರಣೆಗೆ:
ವೈಯಕ್ತಿಕ ಮಾಹಿತಿಯನ್ನು ನಾವು ಪ್ರಕ್ರಿಯೆಗೊಳಿಸುವ ಉದ್ದೇಶ (ಉದಾಹರಣೆಗೆ, ನಮ್ಮ ಸೇವೆಗಳನ್ನು ಒದಗಿಸಲು ಅದನ್ನು ಉಳಿಸಿಕೊಳ್ಳುವ ಅಗತ್ಯವಿದೆಯೇ ಎಂಬುದು);
ಮಾಹಿತಿಯ ಪ್ರಮಾಣ, ಸ್ವರೂಪ ಮತ್ತು ಸೂಕ್ಷ್ಮತೆ;
ಅನಧಿಕೃತ ಬಳಕೆ ಅಥವಾ ಬಹಿರಂಗಪಡಿಸುವಿಕೆಯಿಂದ ಹಾನಿಯಾಗುವ ಸಂಭವನೀಯ ಅಪಾಯ;
ನಮಗೆ ಅನ್ವಯಿಸುವ ಯಾವುದೇ ಕಾನೂನುಬದ್ಧ ಅವಶ್ಯಕತೆಗಳು.
ಮೇಲೆ ವಿವರಿಸಿದಂತೆ ವೈಯಕ್ತಿಕ ಮಾಹಿತಿಯ ಸಂಗ್ರಹಣೆ ಮತ್ತು ಬಳಕೆಗೆ ಸಮ್ಮತಿ ನೀಡಲು ನೀವು ನಿರಾಕರಿಸಬಹುದು. ಆದರೆ, ಸಮ್ಮತಿ ನೀಡಲು ನಿರಾಕರಿಸಿದರೆ, ಜಾಲತಾಣದಲ್ಲಿ ನಿಮ್ಮ ನೋಂದಣಿಗೆ ನಿರ್ಬಂಧ ವಿಧಿಸಲಾಗುತ್ತದೆ.
ಮೂರನೇ ವ್ಯಕ್ತಿಗಳಿಗೆ ವೈಯಕ್ತಿಕ ಮಾಹಿತಿ ಒದಗಿಸುವುದು/ವಿದೇಶಕ್ಕೆ ವರ್ಗಾವಣೆ (ಕಡ್ಡಾಯ)
ಕೆಲವು ಸಂದರ್ಭಗಳಲ್ಲಿ, ಕೆಳಗೆ ವಿವರಿಸಿದ ನಿರ್ದಿಷ್ಟ ಮತ್ತು ಸೀಮಿತ ಉದ್ದೇಶಗಳಿಗಾಗಿ, ಮೇಲಿನ “ಸಂಗ್ರಹಿಸಬೇಕಾದ ವೈಯಕ್ತಿಕ ಮಾಹಿತಿಯ ವಿವರಗಳು” ವಿಭಾಗದಲ್ಲಿ ತಿಳಿಸಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು OpenAI ಮೂರನೇ ವ್ಯಕ್ತಿಗಳಿಗೆ ಒದಗಿಸಬಹುದು:
ಸರ್ಕಾರಿ ಅಧಿಕಾರಿಗಳು ಅಥವಾ ಇತರ ಮೂರನೇ ವ್ಯಕ್ತಿಗಳು: ನಮ್ಮ ಸೇವೆಗಳೊಂದಿಗಿನ ನಿಮ್ಮ ಸಂವಹನದ ಮಾಹಿತಿಯೂ ಸೇರಿದಂತೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು ಕಾನೂನಿಗೆ ಅನುಸಾರವಾಗಿ ಸರ್ಕಾರಿ ಅಧಿಕಾರಿಗಳು, ಉದ್ಯಮದ ಇತರ ಸಂಸ್ಥೆಗಳು ಅಥವಾ ಇತರ ಮೂರನೇ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳಬಹುದು: (i) ಕಾನೂನುಬದ್ಧ ಹೊಣೆಗಾರಿಕೆಯನ್ನು ಪಾಲಿಸಲು ಹಾಗೆ ಮಾಡಬೇಕಾದ ಅಗತ್ಯವಿದ್ದರೆ ಅಥವಾ ಅಂತಹ ಪಾಲನೆಗೆ ಆ ಕ್ರಮ ಅಗತ್ಯವೆಂದು ಸದ್ಭಾವನೆಯಿಂದ ನಂಬಿದರೆ, (ii) ನಮ್ಮ ಹಕ್ಕುಗಳು ಅಥವಾ ಆಸ್ತಿಯನ್ನು ರಕ್ಷಿಸಲು ಮತ್ತು ಸಮರ್ಥಿಸಿಕೊಳ್ಳಲು, (iii) ನಮ್ಮ ನಿಯಮಗಳು, ನೀತಿಗಳು ಅಥವಾ ಕಾನೂನಿನ ಉಲ್ಲಂಘನೆಯಾಗಿದೆ ಎಂದು ನಮ್ಮ ಸ್ವಂತ ವಿವೇಚನೆಯ ಮೇರೆಗೆ ನಿರ್ಧರಿಸಿದರೆ; (iv) ವಂಚನೆ ಅಥವಾ ಇತರ ಕಾನೂನುಬಾಹಿರ ಚಟುವಟಿಕೆಯನ್ನು ಪತ್ತೆಹಚ್ಚಲು ಅಥವಾ ತಡೆಯಲು; (v) ನಮ್ಮ ಉತ್ಪನ್ನಗಳು, ಉದ್ಯೋಗಿಗಳು, ಬಳಕೆದಾರರು ಅಥವಾ ಸಾರ್ವಜನಿಕರ ಸುರಕ್ಷತೆ, ಭದ್ರತೆ ಮತ್ತು ಸಮಗ್ರತೆಯನ್ನು ರಕ್ಷಿಸಲು ಅಥವಾ (vi) ಕಾನೂನುಬದ್ಧ ಹೊಣೆಗಾರಿಕೆಯಿಂದ ರಕ್ಷಿಸಿಕೊಳ್ಳಲು.
ಸಂಬಂಧಿತ ಸಂಸ್ಥೆಗಳು: ನಮ್ಮ ಸಂಬಂಧಿತ ಸಂಸ್ಥೆಗಳಿಗೆ ನಾವು ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಬಹುದು. ಇವು ಎಂದರೆ OpenAI ಅನ್ನು ನಿಯಂತ್ರಿಸುವ, ಅದರ ನಿಯಂತ್ರಣದಲ್ಲಿರುವ ಅಥವಾ ಅದರೊಂದಿಗೆ ಸಾಮಾನ್ಯ ನಿಯಂತ್ರಣಕ್ಕೆ ಒಳಪಟ್ಟಿರುವ ಸಂಸ್ಥೆಗಳು. ನಮ್ಮ ಸಂಬಂಧಿತ ಸಂಸ್ಥೆಗಳು ಈ ವೈಯಕ್ತಿಕ ಮಾಹಿತಿಯನ್ನು ಬಳಸುವಾಗ ನಮ್ಮ ಪ್ರೈವಸಿ ಪಾಲಿಸಿಗೆ ಅನುಗುಣವಾಗಿ ನಡೆದುಕೊಳ್ಳಬಹುದು.
ವ್ಯವಹಾರ ಖಾತೆಯ ನಿರ್ವಾಹಕರು: ನೀವು ChatGPT Enterprise ಅಥವಾ ವ್ಯವಹಾರ ಖಾತೆಗೆ ಸೇರಿದಾಗ, ಆ ಖಾತೆಯ ನಿರ್ವಾಹಕರು ನಿಮ್ಮ ವಿಷಯವನ್ನು ಪ್ರವೇಶಿಸುವುದೂ ಸೇರಿದಂತೆ ನಿಮ್ಮ OpenAI ಖಾತೆಯನ್ನು ಪ್ರವೇಶಿಸಲು ಮತ್ತು ನಿಯಂತ್ರಿಸಲು ಸಾಧ್ಯವಾಗಬಹುದು. ಜೊತೆಗೆ, ನಿಮ್ಮ ಉದ್ಯೋಗದಾತರಿಗೆ ಅಥವಾ ಮತ್ತೊಂದು ಸಂಸ್ಥೆಗೆ ಸೇರಿದ ಇಮೇಲ್ ವಿಳಾಸ ಬಳಸಿ ಖಾತೆ ರಚಿಸಿದರೆ, ನಿಮಗೆ ಖಾತೆ ಇದೆ ಎಂಬ ಸಂಗತಿಯನ್ನು ಮತ್ತು ನಿಮ್ಮ ಇಮೇಲ್ ವಿಳಾಸದಂತಹ ಕೆಲವು ಖಾತೆ ಮಾಹಿತಿಯನ್ನು ನಾವು ಆ ಉದ್ಯೋಗದಾತರು ಅಥವಾ ಸಂಸ್ಥೆಯೊಂದಿಗೆ ಹಂಚಿಕೊಳ್ಳಬಹುದು. ಉದಾಹರಣೆಗೆ, ನಿಮ್ಮನ್ನು ಅವರ ವ್ಯವಹಾರ ಖಾತೆಗೆ ಸೇರಿಸಲು ಅನುವು ಮಾಡಿಕೊಡುವುದಕ್ಕಾಗಿ ಹೀಗೆ ಮಾಡಬಹುದು.
ನೀವು ಸಂವಹನ ನಡೆಸುವ ಅಥವಾ ಮಾಹಿತಿ ಹಂಚಿಕೊಳ್ಳುವ ಇತರ ಬಳಕೆದಾರರು ಮತ್ತು ಮೂರನೇ ವ್ಯಕ್ತಿಗಳು: ಕೆಲವು ಸೇವೆಗಳು ಇತರ ಬಳಕೆದಾರರು ಅಥವಾ ಮೂರನೇ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಅಥವಾ ಮಾಹಿತಿ ಹಂಚಿಕೊಳ್ಳಲು ನಿಮಗೆ ಅವಕಾಶ ನೀಡುತ್ತವೆ. ಉದಾಹರಣೆಗೆ, ನೀವು ಹಂಚಿಕೊಳ್ಳಬಹುದಾದ ವಿಷಯಗಳಲ್ಲಿ ChatGPT ಸಂಭಾಷಣೆಗಳು ಅಥವಾ Sora ವೀಡಿಯೊಗಳು ಮತ್ತು ಪಾತ್ರಗಳು ಸೇರಿವೆ. ಅಥವಾ ಮೂರನೇ ವ್ಯಕ್ತಿಗಳ ಹುಡುಕಾಟ ಮತ್ತು ಖರೀದಿ ಸೇವೆಗಳ ಪಾಲುದಾರರೊಂದಿಗೆ ಮಾಹಿತಿ ಹಂಚಿಕೊಳ್ಳಬಹುದು. ಮೂರನೇ ವ್ಯಕ್ತಿಗಳಾದ ಪಾಲುದಾರರೊಂದಿಗೆ ನೀವು ಹಂಚಿಕೊಳ್ಳುವ ಮಾಹಿತಿ ಅವರದೇ ನಿಯಮಗಳು ಮತ್ತು ಪ್ರೈವಸಿ ಪಾಲಿಸಿಗಳಿಗೆ ಒಳಪಟ್ಟಿರುತ್ತದೆ. ಅವರೊಂದಿಗೆ ಮಾಹಿತಿ ಹಂಚಿಕೊಳ್ಳುವ ಮೊದಲು ಆ ನಿಯಮಗಳು ಮತ್ತು ನೀತಿಗಳನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಅಗತ್ಯಕ್ಕೆ ತಕ್ಕಂತೆ ಕಾಲಕಾಲಕ್ಕೆ ದೂರಸಂಪರ್ಕ ಜಾಲಗಳ ಮೂಲಕ ಕೊರಿಯಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಹೊರತುಪಡಿಸಿ ಇತರ ದೇಶಗಳಿಗೂ ಈ ಮಾಹಿತಿಯನ್ನು ಬಹಿರಂಗಪಡಿಸಬಹುದು.
ಸಮ್ಮತಿ ನೀಡದಿರುವ ಮೂಲಕ ಅಥವಾ ಕೊರಿಯಾ ಪ್ರೈವಸಿ ಪಾಲಿಸಿ ಅನುಬಂಧದಲ್ಲಿನ ಸಂಪರ್ಕ ವಿವರಗಳನ್ನು ಬಳಸಿ ನಮ್ಮನ್ನು ಸಂಪರ್ಕಿಸುವ ಮೂಲಕ, ವೈಯಕ್ತಿಕ ಮಾಹಿತಿಯನ್ನು ಒದಗಿಸಲು ಮತ್ತು/ಅಥವಾ ವರ್ಗಾಯಿಸಲು ಸಮ್ಮತಿ ನೀಡುವುದನ್ನು ನೀವು ನಿರಾಕರಿಸಬಹುದು. ಆದರೆ, ಸಮ್ಮತಿ ನೀಡಲು ನಿರಾಕರಿಸಿದರೆ, ಜಾಲತಾಣದಲ್ಲಿ ನಿಮ್ಮ ನೋಂದಣಿಗೆ ನಿರ್ಬಂಧ ವಿಧಿಸಲಾಗುತ್ತದೆ.
