ಲೂನಾ ರಿಸರ್ವ್ ಆಯ್ದ ಖಾತೆಗಳಿಗೆ ಮಾತ್ರ ಲಭ್ಯವಿದೆ, ಎಲ್ಲ ಖಾತೆಗಳಿಗೂ ಅಲ್ಲ. ಲಭ್ಯತೆ ಬದಲಾಗಬಹುದು.
ಅವಲೋಕನ
ಸಾಮಾನ್ಯ ಬಳಕೆಯ ಕೋಟಾ ಮುಗಿದ ನಂತರ, ಲೂನಾ ರಿಸರ್ವ್ ಆಯ್ದ ಖಾತೆಗಳಿಗೆ GPT-5.6 ಲೂನಾ ಬಳಸಲು ಹೆಚ್ಚುವರಿ ಅವಕಾಶ ನೀಡುತ್ತದೆ. ಮೀಸಲು ಬಳಕೆ ಲಭ್ಯವಿರುವವರೆಗೆ ನೀವು ಲೂನಾ ಜೊತೆ ಸಂಭಾಷಣೆಯನ್ನು ಮುಂದುವರಿಸಬಹುದು.
ಲೂನಾ ರಿಸರ್ವ್ ಒಂದು ಪರ್ಯಾಯ ಮೋಡ್ ಆಗಿದೆ, ನೀವು ಖರೀದಿಸಬೇಕಾದ ಪ್ರತ್ಯೇಕ ಮಾಡೆಲ್ ಅಲ್ಲ. ಇದು ಸಾಮಾನ್ಯ ಬಳಕೆಯನ್ನು ಮರುಸ್ಥಾಪಿಸುವುದಿಲ್ಲ ಅಥವಾ ನಮ್ಮ ಅತ್ಯಂತ ಸಮರ್ಥ ಮಾಡೆಲ್‌ಗಳಿಗೆ ಪ್ರವೇಶ ನೀಡುವುದಿಲ್ಲ.
ಲಭ್ಯತೆ
ಲೂನಾ ರಿಸರ್ವ್ ಆಯ್ದ ವೈಯಕ್ತಿಕ ChatGPT Plus ಮತ್ತು Pro ಖಾತೆಗಳಿಗೆ ಲಭ್ಯವಿದೆ. ಇದು ChatGPT Business ಅಥವಾ ಎಂಟರ್‌ಪ್ರೈಸ್ ಕಾರ್ಯಸ್ಥಳಗಳಲ್ಲಿ ಲಭ್ಯವಿಲ್ಲ. ಲಭ್ಯತೆಯು ನಿಮ್ಮ ಖಾತೆ ಮತ್ತು ಬೆಂಬಲಿತ ಅಪ್ಲಿಕೇಶನ್ ಆವೃತ್ತಿಯನ್ನೂ ಅವಲಂಬಿಸಿರುತ್ತದೆ.
ಲೂನಾ ರಿಸರ್ವ್ ಬೆಂಬಲಿತ Codex ಮತ್ತು ChatGPT Work ಅನುಭವಗಳಿಗೆ ಅನ್ವಯಿಸುತ್ತದೆ. ಇದು ಸಾಮಾನ್ಯ ChatGPT ಚಾಟ್‌ನಿಂದ ಪ್ರತ್ಯೇಕವಾಗಿದೆ ಮತ್ತು ನಿಮ್ಮ ಖಾತೆಗೆ API ಕ್ರೆಡಿಟ್‌ಗಳನ್ನು ಸೇರಿಸುವುದಿಲ್ಲ.
ಲೂನಾ ರಿಸರ್ವ್ ಬಳಸಿ
ನಿಮ್ಮ ಖಾತೆಯಲ್ಲಿ ಲೂನಾ ರಿಸರ್ವ್ ಲಭ್ಯವಿದ್ದರೆ:
ಡೆಸ್ಕ್‌ಟಾಪ್ ಅಪ್ಲಿಕೇಶನ್‌ನಲ್ಲಿ Codex ಅಥವಾ ChatGPT Work ತೆರೆಯಿರಿ, ಅಥವಾ ಜಾಲತಾಣದಲ್ಲಿ ChatGPT Work ತೆರೆಯಿರಿ.
ನಿಮ್ಮ ಸಾಮಾನ್ಯ ಬಳಕೆಯ ಮಿತಿಯನ್ನು ತಲುಪಿದಾಗ, ಬಳಕೆಯ ಎಚ್ಚರಿಕೆಯಲ್ಲಿ ಲೂನಾ ರಿಸರ್ವ್ ಕುರಿತ ಸೂಚನೆ ಅಥವಾ ಚಂದ್ರನ ಚಿಹ್ನೆ ಇದೆಯೇ ಎಂದು ನೋಡಿ.
ಲೂನಾ ಜೊತೆ ನಿಮ್ಮ ಸಂಭಾಷಣೆಯನ್ನು ಮುಂದುವರಿಸಿ.
ನಮ್ಮ ಅತ್ಯಂತ ಸಮರ್ಥ ಮಾಡೆಲ್‌ಗಳನ್ನು ಬಳಸಲು ನಿಮಗೆ ಲಭ್ಯವಿರುವ ಆಯ್ಕೆಗಳನ್ನು ನೋಡಲು ಲೂನಾ ರಿಸರ್ವ್ ಸೂಚಕವನ್ನು ತೆರೆಯಿರಿ. ತೋರಿಸಲಾಗುವ ಆಯ್ಕೆಗಳು ನಿಮ್ಮ ಯೋಜನೆ ಮತ್ತು ಖಾತೆಯನ್ನು ಅವಲಂಬಿಸಿರುತ್ತವೆ.
ಸೂಚನೆಯನ್ನು ಮುಚ್ಚುವುದರಿಂದ ಲೂನಾ ರಿಸರ್ವ್ ನಿಷ್ಕ್ರಿಯಗೊಳ್ಳುವುದಿಲ್ಲ ಅಥವಾ ಸಾಮಾನ್ಯ ಬಳಕೆ ಮರುಸ್ಥಾಪನೆಯಾಗುವುದಿಲ್ಲ. ಮೀಸಲು ಬಳಕೆ ಲಭ್ಯವಿರುವವರೆಗೆ ನೀವು ಲೂನಾ ಜೊತೆ ಮುಂದುವರಿಯಬಹುದು.
ಬಳಕೆ ಮತ್ತು ಮಿತಿಗಳು
ಸಾಮಾನ್ಯ ಬಳಕೆ ಮತ್ತು ಲೂನಾ ರಿಸರ್ವ್‌ಗೆ ಪ್ರತ್ಯೇಕ ಬಳಕೆಯ ಕೋಟಾಗಳಿವೆ:
ಸಾಮಾನ್ಯ ಬಳಕೆಯಲ್ಲಿ ನಿಮ್ಮ ಯೋಜನೆಯೊಂದಿಗೆ ಲಭ್ಯವಿರುವ ಮಾಡೆಲ್‌ಗಳನ್ನು ಬಳಸಬಹುದು.
ಸಾಮಾನ್ಯ ಬಳಕೆಯ ಕೋಟಾ ಮುಗಿದ ನಂತರ, ಲೂನಾ ರಿಸರ್ವ್ ಲೂನಾವನ್ನು ಮಾತ್ರ ಹೆಚ್ಚುವರಿಯಾಗಿ ಬಳಸಲು ಅವಕಾಶ ನೀಡುತ್ತದೆ.
ನಿಮ್ಮ ಸಾಮಾನ್ಯ ಬಳಕೆಯ ಕೋಟಾ ಮುಗಿದಿರುವಾಗ ಇತರ ಮಾಡೆಲ್‌ಗಳು ಲಭ್ಯವಿಲ್ಲದಿರಬಹುದು. ಲೂನಾ ರಿಸರ್ವ್‌ಗೂ ತನ್ನದೇ ಆದ ಬಳಕೆಯ ಮಿತಿ ಇದೆ; ಇದು ಅನಿಯಮಿತವಲ್ಲ. ನಿಮ್ಮ ಉಳಿದ ಕೋಟಾ ಮತ್ತು ಅದು ಮರುಲಭ್ಯವಾಗುವ ಸಮಯವನ್ನು ತೋರಿಸಲಾಗಿದೆಯೇ ಎಂದು ತಿಳಿಯಲು ನಿಮ್ಮ ಖಾತೆಯ ಬಳಕೆಯ ಮಾಹಿತಿಯನ್ನು ಪರಿಶೀಲಿಸಿ.
ಸಾಮಾನ್ಯ ಬಳಕೆ ಮತ್ತೆ ಲಭ್ಯವಾಗುವ ಮೊದಲು ನಿಮ್ಮ ಮೀಸಲು ಕೋಟಾವನ್ನೆಲ್ಲ ಬಳಸಿದರೆ, ಬಳಕೆ ಮತ್ತೆ ಲಭ್ಯವಾಗುವವರೆಗೆ ಕಾಯಬೇಕು ಅಥವಾ ನಿಮ್ಮ ಖಾತೆಯಲ್ಲಿ ನೀಡಲಾದ ಆಯ್ಕೆಯನ್ನು ಬಳಸಬೇಕು.
ಸಾಮಾನ್ಯ ಬಳಕೆಗೆ ಮರಳಿ
ಸಾಮಾನ್ಯ ಬಳಕೆ ಮತ್ತೆ ಲಭ್ಯವಾದಾಗ, ನಿಮ್ಮ ಯೋಜನೆಯೊಂದಿಗೆ ಲಭ್ಯವಿರುವ ಮಾಡೆಲ್‌ಗಳನ್ನು ಮತ್ತೆ ಬಳಸಬಹುದು.
ನಿಮ್ಮ ಯೋಜನೆ ಮತ್ತು ಖಾತೆಯನ್ನು ಅವಲಂಬಿಸಿ, ನಮ್ಮ ಅತ್ಯಂತ ಸಮರ್ಥ ಮಾಡೆಲ್‌ಗಳಿಗೆ ಮತ್ತೆ ಪ್ರವೇಶ ಪಡೆಯಲು ಹೆಚ್ಚುವರಿ ಸೌಲಭ್ಯಗಳ ಯೋಜನೆಗೆ ಬದಲಾಯಿಸುವುದು, ಕ್ರೆಡಿಟ್‌ಗಳನ್ನು ಸೇರಿಸುವುದು ಅಥವಾ ಲಭ್ಯವಿರುವ ಮರುಹೊಂದಿಸುವ ಆಯ್ಕೆಯನ್ನು ಬಳಸುವುದು ಮುಂತಾದ ಆಯ್ಕೆಗಳೂ ಕಾಣಿಸಬಹುದು. ನಿಮಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ಆಯ್ಕೆಗಳು ಕಾಣಿಸಬಹುದು. ನಿಮ್ಮ ಖಾತೆಯಲ್ಲಿ ತೋರಿಸಲಾದ ಆಯ್ಕೆಗಳನ್ನು ಬಳಸಿ.
ಲೂನಾ ರಿಸರ್ವ್‌ನ ಸಮಸ್ಯೆಗಳನ್ನು ಪರಿಹರಿಸಿ
ನಿಮಗೆ ಲೂನಾ ರಿಸರ್ವ್ ಕಾಣಿಸದಿದ್ದರೆ, ಈ ಸೌಲಭ್ಯಕ್ಕೆ ಪ್ರವೇಶ ಪಡೆಯುವ ಖಾತೆಗಳಲ್ಲಿ ನಿಮ್ಮ ಖಾತೆ ಸೇರಿರದಿರಬಹುದು. ಸಾಮಾನ್ಯ ಬಳಕೆಯ ಮಿತಿಯನ್ನು ತಲುಪಿದ ಮಾತ್ರಕ್ಕೆ ಪ್ರವೇಶ ಸಿಗುವುದು ಖಚಿತವಲ್ಲ. ಲಭ್ಯತೆಯೂ ಬದಲಾಗಬಹುದು.
ನಿಮಗೆ ಹಿಂದೆ ಪ್ರವೇಶವಿದ್ದು ಈಗ ಅದು ಇಲ್ಲದಿದ್ದರೆ, ಅಥವಾ ಮೀಸಲು ಬಳಕೆಯಲ್ಲಿ ಅನಿರೀಕ್ಷಿತ ಚಟುವಟಿಕೆ ಕಂಡುಬಂದರೆ, OpenAI ಸಹಾಯ ತಂಡವನ್ನು ಸಂಪರ್ಕಿಸಿ. ಈ ವಿವರಗಳನ್ನು ಸೇರಿಸಿ:
ನಿಮ್ಮ ಯೋಜನೆ ಮತ್ತು ಈ ಹಿಂದೆ ಲೂನಾ ರಿಸರ್ವ್ ಕಾಣಿಸಿಕೊಂಡ ಉತ್ಪನ್ನ.
ಸಮಸ್ಯೆ ಸಂಭವಿಸಿದ ದಿನಾಂಕ, ಸಮಯ ಮತ್ತು ಸಮಯ ವಲಯ.
ಬಳಕೆಯ ಸೂಚಕ ಮತ್ತು ತೋರಿಸಲಾದ ಯಾವುದೇ ಸಂದೇಶದ ಪರದೆಚಿತ್ರ.
ನೀವು ಬಳಸುತ್ತಿದ್ದ ಅಪ್ಲಿಕೇಶನ್‌ನ ಆವೃತ್ತಿ ಮತ್ತು ಮಾಡೆಲ್.
ಪ್ರವೇಶ ಅಥವಾ ಬಳಕೆಯಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಪರಿಶೀಲಿಸಲು OpenAI ಸಹಾಯ ತಂಡ ನೆರವಾಗಬಹುದು. ಆದರೆ ನಿಮಗೆ ಈ ಸೌಲಭ್ಯ ಹಿಂದೆಂದೂ ಲಭ್ಯವಿರದಿದ್ದರೆ, ಸಹಾಯ ತಂಡವು ನಿಮ್ಮ ಖಾತೆಗೆ ಲೂನಾ ರಿಸರ್ವ್ ಅನ್ನು ಸೇರಿಸಲು ಸಾಧ್ಯವಿಲ್ಲ.
Codex ಬಳಕೆಯ ಸಾಮಾನ್ಯ ಮಾರ್ಗದರ್ಶನಕ್ಕಾಗಿ, ನಿಮ್ಮ ChatGPT ಯೋಜನೆಯೊಂದಿಗೆ Codex ಬಳಸುವುದು ನೋಡಿ.
