ಬಜೆಟ್ ವೆಚ್ಚದ ಗತಿ ನಿಯಂತ್ರಣವು ನಿಮ್ಮ ಅಭಿಯಾನದ ವೆಚ್ಚವನ್ನು ಕಾಲಾವಧಿಯುದ್ದಕ್ಕೂ ಹಂಚಲು ನೆರವಾಗುತ್ತದೆ. ಜಾಹೀರಾತು ವೀಕ್ಷಕರ ಸಂಖ್ಯೆ ಮತ್ತು ಪ್ರದರ್ಶನದ ಅವಕಾಶಗಳು ಬದಲಾದಂತೆ, ಜಾಹೀರಾತು ವ್ಯವಸ್ಥಾಪಕವು ಪ್ರದರ್ಶನವನ್ನು ಹೊಂದಿಸುತ್ತದೆ. ಇದರಿಂದ ದಿನದ ಅಥವಾ ಅಭಿಯಾನದ ಮುಂದಿನ ಅವಧಿಯಲ್ಲಿ ಬರುವ ಅವಕಾಶಗಳಿಗೆ ಬಜೆಟ್ ಉಳಿಸಿಕೊಳ್ಳಲು ನೆರವಾಗುತ್ತದೆ.
ನಿಮ್ಮ ವೆಚ್ಚವು ದಿನದಿಂದ ದಿನಕ್ಕೆ ಬದಲಾಗಬಹುದು. ವೆಚ್ಚದ ಗತಿ ನಿಯಂತ್ರಣವು ಸಮಾನ ವೆಚ್ಚವನ್ನಾಗಲಿ, ನಿಮ್ಮ ಅಭಿಯಾನದ ಸಂಪೂರ್ಣ ಬಜೆಟ್ ಖರ್ಚಾಗುವುದನ್ನಾಗಲಿ ಖಾತರಿಪಡಿಸುವುದಿಲ್ಲ.
ದೈನಂದಿನ ಬಜೆಟ್ ವೆಚ್ಚದ ಗತಿ ನಿಯಂತ್ರಣ
ದೈನಂದಿನ ಬಜೆಟ್ ಹೊಂದಿರುವ ಅಭಿಯಾನಗಳಿಗೆ, ಜಾಹೀರಾತು ವ್ಯವಸ್ಥಾಪಕವು ದಿನವಿಡೀ ಜಾಹೀರಾತು ಪ್ರದರ್ಶನದ ಗತಿಯನ್ನು ನಿಯಂತ್ರಿಸುತ್ತದೆ. ನಿಮ್ಮ ಜಾಹೀರಾತು ಖಾತೆಯ ಸಮಯ ವಲಯದಲ್ಲಿ ಭಾನುವಾರದಿಂದ ಶನಿವಾರದವರೆಗಿನ ಬಜೆಟ್ ವಾರದ ಸರಾಸರಿ ದೈನಂದಿನ ಮೊತ್ತವೇ ನಿಮ್ಮ ದೈನಂದಿನ ಬಜೆಟ್. ಆದ್ದರಿಂದ, ಅನ್ವಯವಾಗುವ ವೆಚ್ಚದ ಮಿತಿಗಳೊಳಗೆ ಕೆಲವು ದಿನಗಳಲ್ಲಿ ಹೆಚ್ಚು ಮತ್ತು ಇತರ ದಿನಗಳಲ್ಲಿ ಕಡಿಮೆ ಖರ್ಚಾಗಬಹುದು.
ದೈನಂದಿನ ಬಜೆಟ್‌ಗಳು, ವೆಚ್ಚದ ಮಿತಿಗಳು ಮತ್ತು ಬಜೆಟ್ ಬದಲಾವಣೆಗಳ ವಿವರಗಳಿಗಾಗಿ, ದೈನಂದಿನ ಬಜೆಟ್‌ಗಳು ನೋಡಿ.
ಅಭಿಯಾನದ ಒಟ್ಟು ಬಜೆಟ್ ವೆಚ್ಚದ ಗತಿ ನಿಯಂತ್ರಣ
ಒಟ್ಟು ಬಜೆಟ್ ಹೊಂದಿರುವ ಅಭಿಯಾನಗಳಿಗೆ, ಜಾಹೀರಾತು ವ್ಯವಸ್ಥಾಪಕವು ಉಳಿದ ಬಜೆಟ್ ಮತ್ತು ಅಭಿಯಾನದ ವೇಳಾಪಟ್ಟಿಯನ್ನು ಆಧರಿಸಿ ಕಾಲಾವಧಿಯುದ್ದಕ್ಕೂ ವೆಚ್ಚವನ್ನು ನಿಯಂತ್ರಿಸುತ್ತದೆ.
ನಿಮ್ಮ ಅಭಿಯಾನವು ನಿಗದಿತ ಗತಿಗಿಂತ ವೇಗವಾಗಿ ಖರ್ಚು ಮಾಡುತ್ತಿದ್ದರೆ, ಮುಂದಿನ ಅವಧಿಗೆ ಬಜೆಟ್ ಉಳಿಸಲು ಜಾಹೀರಾತು ಪ್ರದರ್ಶನ ನಿಧಾನಗೊಳ್ಳಬಹುದು. ಖರ್ಚು ನಿಗದಿತ ಗತಿಗಿಂತ ನಿಧಾನವಾಗಿದ್ದರೆ, ಅದನ್ನು ಸರಿದೂಗಿಸುವ ಅವಕಾಶ ನೀಡಲು ಜಾಹೀರಾತು ಪ್ರದರ್ಶನ ಮುಂದುವರಿಯಬಹುದು. ಬಜೆಟ್ ಅನಿರೀಕ್ಷಿತವಾಗಿ ಬೇಗನೆ ಖಾಲಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ. ಆದರೂ, ನೈಜ ವೆಚ್ಚವು ಲಭ್ಯವಿರುವ ಜಾಹೀರಾತು ಪ್ರದರ್ಶನದ ಅವಕಾಶಗಳನ್ನೇ ಅವಲಂಬಿಸಿರುತ್ತದೆ.
ನೀವು ಉದ್ದೇಶಿಸಿರುವ ಅಭಿಯಾನದ ಅವಧಿಗೆ ವೆಚ್ಚದ ಗತಿಯನ್ನು ಹೊಂದಿಸಲು, ಅಂತಿಮ ದಿನಾಂಕವನ್ನು ನಿಗದಿಪಡಿಸುವಂತೆ ನಾವು ಶಿಫಾರಸು ಮಾಡುತ್ತೇವೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ನನ್ನ ಅಭಿಯಾನದ ಒಟ್ಟು ಬಜೆಟ್ ಅಭಿಯಾನದ ಅಂತಿಮ ದಿನಾಂಕದವರೆಗೆ ಸಾಕಾಗುತ್ತದೆಯೇ?
ಹಾಗಾಗುತ್ತದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ನಿಮ್ಮ ಅಂತಿಮ ದಿನಾಂಕವು ಅಭಿಯಾನದ ಜಾಹೀರಾತುಗಳನ್ನು ಪ್ರದರ್ಶಿಸಬಹುದಾದ ಕೊನೆಯ ದಿನಾಂಕವಾಗಿದೆ. ಆದರೆ ನಿಮ್ಮ ಬಜೆಟ್ ಅದಕ್ಕೂ ಮುನ್ನವೇ ಸಂಪೂರ್ಣವಾಗಿ ಖರ್ಚಾಗಬಹುದು. ವೆಚ್ಚದ ಗತಿ ನಿಯಂತ್ರಣವು ಕಾಲಾವಧಿಯುದ್ದಕ್ಕೂ ಖರ್ಚನ್ನು ನಿರ್ವಹಿಸಲು ನೆರವಾಗುತ್ತದೆ. ಆದರೆ ಅಂತಿಮ ದಿನಾಂಕದವರೆಗೆ ನಿಮ್ಮ ಬಜೆಟ್ ಸಾಕಾಗುತ್ತದೆ ಎಂದು ಖಾತರಿಪಡಿಸುವುದಿಲ್ಲ.
ಒಟ್ಟು ಬಜೆಟ್ ಹೊಂದಿರುವ ಅಭಿಯಾನಕ್ಕೆ ವೆಚ್ಚದ ಗತಿ ನಿಯಂತ್ರಣದ ಅವಧಿ ಎಷ್ಟು?
ಅಂತಿಮ ದಿನಾಂಕ ಹೊಂದಿರುವ ಅಭಿಯಾನಗಳಿಗೆ, ಜಾಹೀರಾತು ವ್ಯವಸ್ಥಾಪಕವು ಆ ದಿನಾಂಕದವರೆಗೆ ಉಳಿದಿರುವ ಸಮಯವನ್ನು ವೆಚ್ಚದ ಗತಿ ನಿಯಂತ್ರಣಕ್ಕೆ ಬಳಸುತ್ತದೆ. ಈ ಅವಧಿಯ ಗರಿಷ್ಠ ಮಿತಿ 365 ಕ್ಯಾಲೆಂಡರ್ ದಿನಗಳು. ಅಂತಿಮ ದಿನಾಂಕವಿಲ್ಲದ ಅಭಿಯಾನಗಳು ಪೂರ್ವನಿಯೋಜಿತವಾಗಿ 60 ದಿನಗಳ ವೆಚ್ಚದ ಗತಿ ನಿಯಂತ್ರಣ ಅವಧಿಯನ್ನು ಬಳಸುತ್ತವೆ.
ನೀವು ಉದ್ದೇಶಿಸಿರುವ ಅಭಿಯಾನದ ಅವಧಿಗೆ ವೆಚ್ಚದ ಗತಿಯನ್ನು ಹೊಂದಿಸಲು, ಅಂತಿಮ ದಿನಾಂಕವನ್ನು ನಿಗದಿಪಡಿಸುವಂತೆ ನಾವು ಶಿಫಾರಸು ಮಾಡುತ್ತೇವೆ. ಈ ಅವಧಿಗಳು ವೆಚ್ಚವನ್ನು ನಿಯಂತ್ರಿಸಲು ಮಾರ್ಗದರ್ಶಿಯಾಗುತ್ತವೆ. ನಿಮ್ಮ ಬಜೆಟ್ ಇಡೀ ಅವಧಿಗೆ ಸಾಕಾಗುತ್ತದೆ ಅಥವಾ ಸಂಪೂರ್ಣವಾಗಿ ಖರ್ಚಾಗುತ್ತದೆ ಎಂದು ಅವು ಖಾತರಿಪಡಿಸುವುದಿಲ್ಲ.
ಅಂತಿಮ ದಿನಾಂಕವಿಲ್ಲದೆ ಅಭಿಯಾನದ ಒಟ್ಟು ಬಜೆಟ್ ಅನ್ನು ಬಳಸಬಹುದೇ?
ಹೌದು. ಒಟ್ಟು ಬಜೆಟ್ ಹೊಂದಿದ್ದು ಅಂತಿಮ ದಿನಾಂಕವಿಲ್ಲದ ಅಭಿಯಾನಗಳಿಗೆ, ಜಾಹೀರಾತು ವ್ಯವಸ್ಥಾಪಕವು ಪೂರ್ವನಿಯೋಜಿತ ವೆಚ್ಚದ ಗತಿ ನಿಯಂತ್ರಣ ಅವಧಿಯನ್ನು ಬಳಸುತ್ತದೆ. ವೆಚ್ಚದ ಗತಿ ನಿಯಂತ್ರಣವು ನೀವು ಉದ್ದೇಶಿಸಿರುವ ಅಭಿಯಾನದ ವೇಳಾಪಟ್ಟಿಯನ್ನು ಪರಿಗಣಿಸಬೇಕೆಂದರೆ, ಅಂತಿಮ ದಿನಾಂಕವನ್ನು ನಿಗದಿಪಡಿಸಿ.
ನನ್ನ ಅಭಿಯಾನದ ಒಟ್ಟು ಬಜೆಟ್ ಅಥವಾ ಅಂತಿಮ ದಿನಾಂಕವನ್ನು ಬದಲಾಯಿಸಿದರೆ ಏನಾಗುತ್ತದೆ?
ಜಾಹೀರಾತು ವ್ಯವಸ್ಥಾಪಕವು ನಿಮ್ಮ ಪರಿಷ್ಕೃತ ಬಜೆಟ್ ಅಥವಾ ವೇಳಾಪಟ್ಟಿಯನ್ನು ಬಳಸಿ ವೆಚ್ಚದ ಗತಿಯನ್ನು ಮರುಲೆಕ್ಕಾಚಾರ ಮಾಡುತ್ತದೆ. ನಿಮ್ಮ ಅಭಿಯಾನದ ಪರಿಷ್ಕೃತ ಒಟ್ಟು ಬಜೆಟ್ ಕನಿಷ್ಠ ಈಗಾಗಲೇ ಖರ್ಚಾದ ಮೊತ್ತದಷ್ಟಾದರೂ ಇರಬೇಕು. ಅದನ್ನು ಈಗಾಗಲೇ ಖರ್ಚಾದ ಮೊತ್ತಕ್ಕೆ ಸಮನಾಗಿ ನಿಗದಿಪಡಿಸಿದರೆ, ಜಾಹೀರಾತು ಪ್ರದರ್ಶನ ನಿಲ್ಲುತ್ತದೆ.
ಹರಾಜು ಮೊತ್ತ ನಿಗದಿಪಡಿಸುವ ತಂತ್ರವನ್ನು ಬದಲಾಯಿಸಿದರೆ ನನ್ನ ಅಭಿಯಾನವು ಹೆಚ್ಚು ವೇಗವಾಗಿ ಖರ್ಚು ಮಾಡುತ್ತದೆಯೇ?
ಹರಾಜು ಮೊತ್ತ ನಿಗದಿಪಡಿಸುವ ತಂತ್ರವನ್ನು ಬದಲಾಯಿಸಿದರೂ, ಅಭಿಯಾನದ ಒಟ್ಟು ಬಜೆಟ್ ವೆಚ್ಚದ ಗತಿ ನಿಯಂತ್ರಣವು ಅನ್ವಯವಾಗುತ್ತಲೇ ಇರುತ್ತದೆ. ಕಡಿಮೆ ಹರಾಜು ಮೊತ್ತಗಳು ಜಾಹೀರಾತು ಪ್ರದರ್ಶನವನ್ನು ಸೀಮಿತಗೊಳಿಸಬಹುದು. ಇದರಿಂದ ನಿಮ್ಮ ಅಭಿಯಾನವು ತನ್ನ ಬಜೆಟ್‌ಗಿಂತ ಕಡಿಮೆ ಖರ್ಚು ಮಾಡಬಹುದು.
