ಶಾಪಿಫೈಗಾಗಿ ChatGPT ಜಾಹೀರಾತುಗಳ ಅಪ್ಲಿಕೇಶನ್ ನಿಮ್ಮ ಶಾಪಿಫೈ ಅಂಗಡಿಯ ಉತ್ಪನ್ನಗಳ ಪಟ್ಟಿ ಮತ್ತು ವಾಣಿಜ್ಯ ಚಟುವಟಿಕೆಗಳ ದತ್ತಾಂಶವನ್ನು ಜಾಹೀರಾತು ವ್ಯವಸ್ಥಾಪಕಕ್ಕೆ ಸಂಪರ್ಕಿಸುತ್ತದೆ. ಇದರಿಂದ ನೀವು ChatGPT ಜಾಹೀರಾತುಗಳನ್ನು ವೇಗವಾಗಿ ರಚಿಸಬಹುದು, ದಾಸ್ತಾನು ಮಾಹಿತಿಯನ್ನು ನಿಮ್ಮ ಶಾಪಿಫೈ ಅಂಗಡಿಯೊಂದಿಗೆ ಹೊಂದಾಣಿಕೆಯಲ್ಲಿ ಇಡಬಹುದು ಮತ್ತು ಕಡಿಮೆ ಹಸ್ತಚಾಲಿತ ಸಿದ್ಧತೆಯೊಂದಿಗೆ ಅಭಿಯಾನದ ಕಾರ್ಯಕ್ಷಮತೆಯನ್ನು ಅಳೆಯಬಹುದು.
ಈ ಸಂಯೋಜನೆ ಪ್ರಸ್ತುತ ಅಮೆರಿಕದ ಎಲ್ಲ ಶಾಪಿಫೈ ಗ್ರಾಹಕರಿಗೆ ಲಭ್ಯವಿದೆ. ಶೀಘ್ರದಲ್ಲೇ ChatGPT ಜಾಹೀರಾತುಗಳು ಲಭ್ಯವಿರುವ ಎಲ್ಲ ಪ್ರದೇಶಗಳಲ್ಲೂ ಲಭ್ಯವಾಗಲಿದೆ.
ಪ್ರಾರಂಭಿಸುವ ಮೊದಲು ನಿಮಗೆ ಇವು ಬೇಕಾಗುತ್ತವೆ:
ಸಕ್ರಿಯ ಶಾಪಿಫೈ ಅಂಗಡಿ
ಸಕ್ರಿಯ ಜಾಹೀರಾತು ವ್ಯವಸ್ಥಾಪಕ ಖಾತೆ ಅಥವಾ ಅದನ್ನು ರಚಿಸಲು ಅಗತ್ಯವಿರುವ ಮಾಹಿತಿ
ಶಾಪಿಫೈನಲ್ಲಿ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಅನುಮತಿ
ನಿಮ್ಮ ಜಾಹೀರಾತು ವ್ಯವಸ್ಥಾಪಕ ಖಾತೆಯನ್ನು ನಿರ್ವಹಿಸಲು ಅನುಮತಿ
ನಿಮ್ಮ ಜಾಹೀರಾತು ಖಾತೆಗೆ ಜಾಲತಾಣ, ಉದ್ಯಮ ವಲಯ, ದೇಶ, ಕರೆನ್ಸಿ ಮತ್ತು ಸಮಯ ವಲಯದ ವಿವರಗಳು
ನಿಮ್ಮ ಶಾಪಿಫೈ ಖಾತೆಯನ್ನು ChatGPT ಜಾಹೀರಾತುಗಳಿಗೆ ಸಂಪರ್ಕಿಸಿ
ಶಾಪಿಫೈನಲ್ಲಿ, ಶಾಪಿಫೈಗಾಗಿ ಇರುವ ChatGPT ಜಾಹೀರಾತುಗಳ ಅಪ್ಲಿಕೇಶನ್ ಅನ್ನು ಸ್ಥಾಪಿಸಿ ಅಥವಾ ತೆರೆಯಿರಿ.
ಖಾತೆಯನ್ನು ಸಂಪರ್ಕಿಸಿ ಆಯ್ಕೆಯನ್ನು ಆರಿಸಿ.
ಅಸ್ತಿತ್ವದಲ್ಲಿರುವ ಜಾಹೀರಾತು ವ್ಯವಸ್ಥಾಪಕ ಖಾತೆಯನ್ನು ಆರಿಸಿ. ನೀವು ಖಾತೆಯನ್ನು ರಚಿಸಬೇಕಿದ್ದರೆ, ನಿಮ್ಮ ಸಂಸ್ಥೆ, ಖಾತೆಯ ಹೆಸರು, ಜಾಲತಾಣ, ಉದ್ಯಮ ವಲಯ, ದೇಶ, ಕರೆನ್ಸಿ ಮತ್ತು ಸಮಯ ವಲಯವನ್ನು ದೃಢೀಕರಿಸಿ.
ಶಾಪಿಫೈಗಾಗಿ OpenAI ಪಿಕ್ಸೆಲ್ ಅನ್ನು ಆರಿಸಿ ಅಥವಾ ರಚಿಸಿ.
ಅರ್ಹ ಶಾಪಿಫೈ ವಾಣಿಜ್ಯ ಚಟುವಟಿಕೆಗಳ ದತ್ತಾಂಶವು ಜಾಹೀರಾತು ವ್ಯವಸ್ಥಾಪಕಕ್ಕೆ ರವಾನೆಯಾಗಲು ಪಿಕ್ಸೆಲ್ ಅನ್ನು ಸಂಪರ್ಕಿಸಿ.
ನಿಮ್ಮ ಉತ್ಪನ್ನಗಳ ದಾಸ್ತಾನು ವಿವರಗಳು ನಿಮ್ಮ ChatGPT ಜಾಹೀರಾತುಗಳ ಉತ್ಪನ್ನ ದತ್ತಾಂಶ ಹರಿವಿನೊಂದಿಗೆ ಸಿಂಕ್ ಆಗುವವರೆಗೆ ಕಾಯಿರಿ. ಸಿಂಕ್ ಆಗಲು ಬೇಕಾಗುವ ಸಮಯವು ಉತ್ಪನ್ನಗಳ ಪಟ್ಟಿಯ ಗಾತ್ರ ಮತ್ತು ವ್ಯವಸ್ಥೆಯ ಸ್ಥಿತಿಗತಿಗಳನ್ನು ಅವಲಂಬಿಸಿರುತ್ತದೆ.
ಜಾಹೀರಾತು ವ್ಯವಸ್ಥಾಪಕದಲ್ಲಿ, ಉತ್ಪನ್ನ ಜಾಹೀರಾತುಗಳನ್ನು ರಚಿಸಲು ಸಿಂಕ್ ಆದ ಉತ್ಪನ್ನ ದತ್ತಾಂಶ ಹರಿವನ್ನು ಬಳಸಿ.
ChatGPT ಜಾಹೀರಾತುಗಳೊಂದಿಗಿನ ಸಂಪರ್ಕವು ಯಾವ ಮಾಹಿತಿಯನ್ನು ಸಿಂಕ್ ಮಾಡುತ್ತದೆ
ಶಾಪಿಫೈಯೊಂದಿಗೆ ChatGPT ಜಾಹೀರಾತುಗಳ ಸಂಯೋಜನೆಯು ಇವುಗಳನ್ನು ಸಿಂಕ್ ಮಾಡುತ್ತದೆ:
ಉತ್ಪನ್ನ ಜಾಹೀರಾತುಗಳಿಗಾಗಿ ಉತ್ಪನ್ನಗಳ ದಾಸ್ತಾನು ಮತ್ತು ಪಟ್ಟಿಯ ಮಾಹಿತಿ
ಉತ್ಪನ್ನ ಮಾಹಿತಿಯನ್ನು ನವೀಕೃತವಾಗಿಡಲು ಸಹಾಯ ಮಾಡುವ ಅಂಗಡಿಯ ನವೀಕರಣಗಳು
ಕಾರ್ಯಕ್ಷಮತೆಯನ್ನು ಗಮನಿಸಲು ಮತ್ತು ಸುಧಾರಿಸಲು, ಸಂಪರ್ಕಿಸಲಾದ ಶಾಪಿಫೈಗಾಗಿ OpenAI ಪಿಕ್ಸೆಲ್ ಮೂಲಕ ವಾಣಿಜ್ಯ ಚಟುವಟಿಕೆಗಳ ದತ್ತಾಂಶ
ಶಾಪಿಫೈನಲ್ಲಿ ChatGPT ಜಾಹೀರಾತು ಅಭಿಯಾನವನ್ನು ರಚಿಸಿ
ಶಾಪಿಫೈನಲ್ಲಿ ChatGPT ಜಾಹೀರಾತನ್ನು ತೆರೆಯಿರಿ
ಅಭಿಯಾನವನ್ನು ರಚಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಅಭಿಯಾನದ ಹೆಸರು, ವೆಚ್ಚದ ಮಿತಿ, ಸಾಧಿಸಲು ಬಯಸುವ ಚಟುವಟಿಕೆ ಮತ್ತು ಗುರಿ ಪ್ರೇಕ್ಷಕರ ವಿವರಗಳನ್ನು ನಮೂದಿಸಿ
ನೀವು ಪ್ರದರ್ಶಿಸಲು ಬಯಸುವ ಜಾಹೀರಾತಿನ ಪ್ರಕಾರವನ್ನು ಆರಿಸಿ - ಎಲ್ಲ ಉತ್ಪನ್ನಗಳು, ಒಂದೇ ಉತ್ಪನ್ನ ಅಥವಾ ಜಾಲತಾಣ
ಜಾಹೀರಾತಿನಲ್ಲಿ ಸೇರಿಸಬೇಕಾದ ಉತ್ಪನ್ನಗಳನ್ನು ಆರಿಸಿ
ಜಾಹೀರಾತಿನ ಪೂರ್ವವೀಕ್ಷಣೆಯನ್ನು ಪರಿಶೀಲಿಸಿ
ಅಭಿಯಾನವನ್ನು ರಚಿಸಿ ಮತ್ತು ಪ್ರಾರಂಭಿಸಿ ಆಯ್ಕೆಯನ್ನು ಆರಿಸಿ
ಗಮನಿಸಿ: ಎಲ್ಲ ಪ್ರಮುಖ ಸೌಲಭ್ಯಗಳು ಶಾಪಿಫೈನಲ್ಲಿ ಲಭ್ಯವಿದ್ದರೂ, ಹೆಚ್ಚಿನ ಸೌಲಭ್ಯಗಳನ್ನು ಬಯಸುವ ಜಾಹೀರಾತುದಾರರು ಜಾಹೀರಾತು ವ್ಯವಸ್ಥಾಪಕದಲ್ಲಿ ಅವುಗಳನ್ನು ಬಳಸಬಹುದು. ಉದಾಹರಣೆಗೆ, ವೆಚ್ಚದ ಮಿತಿಯನ್ನು ನಿಗದಿತ $25ರ ಹಂತಗಳಲ್ಲಿ ಹೊಂದಿಸುವ ಬದಲು $28ಕ್ಕೆ ಹೊಂದಿಸಬಹುದು.
ಅಭಿಯಾನಕ್ಕೆ ಸಂಬಂಧಿಸಿದ ಫಲಿತಾಂಶಗಳು ಮತ್ತು ಕಾರ್ಯಕ್ಷಮತೆಯನ್ನು ವೀಕ್ಷಿಸಿ
ಒಟ್ಟಾರೆ ಜಾಹೀರಾತಿನ ಕಾರ್ಯಕ್ಷಮತೆಯನ್ನು ವೀಕ್ಷಿಸಲು, ಶಾಪಿಫೈನಲ್ಲಿನ ವಿಶ್ಲೇಷಣೆ ಟ್ಯಾಬ್‌ಗೆ ಹೋಗಿ ನಿಮ್ಮ ಫಲಿತಾಂಶಗಳನ್ನು ನೋಡಿ.
ಕಾರ್ಯಕ್ಷಮತೆಯ ವಿವರಗಳನ್ನು ವೀಕ್ಷಿಸಲು, ಜಾಹೀರಾತು ವ್ಯವಸ್ಥಾಪಕಕ್ಕೆ ಹೋಗಿ ಅಲ್ಲಿ ಅಭಿಯಾನಗಳನ್ನು ಪರಿಶೀಲಿಸಿ.
ಶಾಪಿಫೈ ಸಂಪರ್ಕವನ್ನು ಕಡಿತಗೊಳಿಸಿ
ಶಾಪಿಫೈ ಸಂಪರ್ಕವನ್ನು ಕಡಿತಗೊಳಿಸಿದರೆ, ನಿಮ್ಮ ಅಂಗಡಿಯಿಂದ ಮುಂದಿನ ಉತ್ಪನ್ನ ನವೀಕರಣಗಳು ಬರುವುದಿಲ್ಲ. ಸಂಪರ್ಕವನ್ನು ಕಡಿತಗೊಳಿಸುವುದರಿಂದ ನಿಮ್ಮ ಜಾಹೀರಾತು ವ್ಯವಸ್ಥಾಪಕ ಖಾತೆ ಅಥವಾ ಅಸ್ತಿತ್ವದಲ್ಲಿರುವ ಅಭಿಯಾನಗಳು ಅಳಿಸಿಹೋಗುವುದಿಲ್ಲ. ಅಸ್ತಿತ್ವದಲ್ಲಿರುವ ಅಭಿಯಾನಗಳು ಸಂಪರ್ಕ ಕಡಿತಗೊಂಡ ಶಾಪಿಫೈ ಉತ್ಪನ್ನ ದತ್ತಾಂಶ ಹರಿವನ್ನು ಅವಲಂಬಿಸಿದ್ದರೆ, ಅವು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು ಅಥವಾ ಅವುಗಳ ನವೀಕರಣ ನಿಲ್ಲಬಹುದು.
ಸಮಸ್ಯೆ ನಿವಾರಣೆ
ನಿಮ್ಮ ಉತ್ಪನ್ನಗಳು ಜಾಹೀರಾತು ವ್ಯವಸ್ಥಾಪಕದಲ್ಲಿ ಕಾಣಿಸದಿದ್ದರೆ:
ಶಾಪಿಫೈ ಅಪ್ಲಿಕೇಶನ್ ಸರಿಯಾದ ಜಾಹೀರಾತು ವ್ಯವಸ್ಥಾಪಕ ಖಾತೆಗೆ ಸಂಪರ್ಕಗೊಂಡಿದೆಯೇ ಎಂದು ದೃಢೀಕರಿಸಿ.
ಉತ್ಪನ್ನ ದತ್ತಾಂಶ ಹರಿವಿನ ಸಿಂಕ್ ಪೂರ್ಣಗೊಂಡಿದೆಯೇ ಎಂದು ದೃಢೀಕರಿಸಿ.
ನಿಮ್ಮ ಶಾಪಿಫೈ ಉತ್ಪನ್ನಗಳು ಸಕ್ರಿಯವಾಗಿವೆಯೇ ಮತ್ತು ಲಭ್ಯವಿವೆಯೇ ಎಂದು ಪರಿಶೀಲಿಸಿ.
ಶಾಪಿಫೈಗಾಗಿ OpenAI ಪಿಕ್ಸೆಲ್ ಸಂಪರ್ಕಗೊಂಡಿದೆಯೇ ಎಂದು ದೃಢೀಕರಿಸಿ.
ಸಿಂಕ್ ಪೂರ್ಣಗೊಂಡ ನಂತರ ಜಾಹೀರಾತು ವ್ಯವಸ್ಥಾಪಕವನ್ನು ಮರುಲೋಡ್ ಮಾಡಿ.
ನೀವು ಕ್ರೋಮ್ ಅಥವಾ ಸಫಾರಿ ಬ್ರೌಸರ್ ಬಳಸುತ್ತಿದ್ದೀರಾ ಎಂದು ದೃಢೀಕರಿಸಿ.
ಸಮಸ್ಯೆ ಮುಂದುವರಿದರೆ, ನೀವು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ಜಾಹೀರಾತು ವ್ಯವಸ್ಥಾಪಕ ಖಾತೆಯ ವಿವರಗಳೊಂದಿಗೆ ads-support@openai.com ಅನ್ನು ಸಂಪರ್ಕಿಸಿ.
