ಅವಲೋಕನ
ChatGPT ಮತ್ತು ಇತರ ಗ್ರಾಹಕ ಸೇವೆಗಳ ಡೇಟಾವನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿರ್ವಹಿಸಲು OpenAI ನಿಮಗೆ ನಿಯಂತ್ರಣಗಳನ್ನು ಒದಗಿಸುತ್ತದೆ. ಲಭ್ಯವಿರುವ ಆಯ್ಕೆಗಳಲ್ಲಿ ಮಾಡೆಲ್ ಸುಧಾರಣೆ ಸೆಟ್ಟಿಂಗ್‌ಗಳು, ಮೆಮೊರಿ ನಿಯಂತ್ರಣಗಳು, ತಾತ್ಕಾಲಿಕ ಚಾಟ್, ಖಾತೆ ಅಳಿಸುವಿಕೆ ಮತ್ತು ಗೌಪ್ಯತೆ ವಿನಂತಿಗಳು ಸೇರಿವೆ.
ಯಾವ ನಿಯಂತ್ರಣಗಳು ಲಭ್ಯವಿರುತ್ತವೆ ಎಂಬುದು ನಿಮ್ಮ ಚಂದಾದಾರಿಕೆ ಯೋಜನೆ, ಖಾತೆಯ ಪ್ರಕಾರ ಮತ್ತು ವರ್ಕ್‌ಸ್ಪೇಸ್ ಸೆಟ್ಟಿಂಗ್‌ಗಳನ್ನು ಅವಲಂಬಿಸಿರುತ್ತದೆ. ವೈಯಕ್ತಿಕ ಗ್ರಾಹಕ ಖಾತೆಗಳ ಡೇಟಾಗಿಂತ ಭಿನ್ನವಾಗಿ, ವ್ಯಾಪಾರ ಮತ್ತು ನಿರ್ವಹಿಸಲಾದ ವರ್ಕ್‌ಸ್ಪೇಸ್‌ಗಳ ಡೇಟಾವನ್ನು OpenAI ನಿರ್ವಹಿಸುತ್ತದೆ.
ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ
ChatGPT ಯಲ್ಲಿ ಸೆಟ್ಟಿಂಗ್‌ಗಳನ್ನು ತೆರೆದು, ಡೇಟಾ ನಿಯಂತ್ರಣಗಳನ್ನು ಆಯ್ಕೆಮಾಡಿ. ಅಲ್ಲಿ ಮಾಡೆಲ್ ಸುಧಾರಣೆಗೆ ಸಂಬಂಧಿಸಿದ ಆದ್ಯತೆಗಳು ಮತ್ತು ಇತರ ಡೇಟಾ ನಿಯಂತ್ರಣಗಳನ್ನು ನಿರ್ವಹಿಸಬಹುದು. ಮೆಮೊರಿ ಸೆಟ್ಟಿಂಗ್‌ಗಳು ಸೆಟ್ಟಿಂಗ್‌ಗಳು > ವೈಯಕ್ತೀಕರಣ ವಿಭಾಗದಲ್ಲಿವೆ.
ಈ ಆಯ್ಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಂಬಂಧಿತ ಸೆಟ್ಟಿಂಗ್‌ಗಳನ್ನು ಹುಡುಕಲು ಗೌಪ್ಯತೆ ಕೇಂದ್ರ ಕೂಡ ನೆರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ, ChatGPT ಯಲ್ಲಿನ ಡೇಟಾ ನಿಯಂತ್ರಣಗಳು ನೋಡಿ.
ತಾತ್ಕಾಲಿಕ ಚಾಟ್
ತಾತ್ಕಾಲಿಕ ಚಾಟ್‌ಗಳು ನಿಮ್ಮ ಚಾಟ್ ಇತಿಹಾಸದಲ್ಲಿ ಕಾಣಿಸುವುದಿಲ್ಲ, ಮೆಮೊರಿಗಳನ್ನು ರಚಿಸುವುದಿಲ್ಲ ಅಥವಾ ನವೀಕರಿಸುವುದಿಲ್ಲ. ಅವು ತಾತ್ಕಾಲಿಕವಾಗಿರುವವರೆಗೆ OpenAI ಮಾಡೆಲ್‌ಗಳನ್ನು ಸುಧಾರಿಸಲು ಅವುಗಳನ್ನು ಬಳಸಲಾಗುವುದಿಲ್ಲ. ಸಂಭಾಷಣೆ ಪ್ರಾರಂಭವಾಗುವ ಮೊದಲು, ಚಾಟ್ ಅನ್ನು ವೈಯಕ್ತೀಕರಿಸಬೇಕೇ ಎಂಬುದನ್ನು ಆಯ್ಕೆಮಾಡಿ. ವೈಯಕ್ತೀಕರಿಸಿದ ತಾತ್ಕಾಲಿಕ ಚಾಟ್‌ಗಳು ಈಗಾಗಲೇ ಇರುವ ಮೆಮೊರಿಗಳು, ನೀವು ಹೊಂದಿಸಿದ ಸೂಚನೆಗಳು ಮತ್ತು ಪ್ಲಗಿನ್‌ಗಳನ್ನು ಬಳಸಬಹುದು. ನೀವು ಚಾಟ್ ಪ್ರಾರಂಭಿಸುವಾಗ ವೈಯಕ್ತೀಕರಣವನ್ನು ನಿಷ್ಕ್ರಿಯಗೊಳಿಸಬಹುದು. ಖಾತೆ ಮತ್ತು ವರ್ಕ್‌ಸ್ಪೇಸ್ ನಿರ್ಬಂಧಗಳು ಆಗಲೂ ಅನ್ವಯಿಸುತ್ತವೆ. ಸುರಕ್ಷತೆಯ ಉದ್ದೇಶಗಳಿಗಾಗಿ OpenAI ಒಂದು ಪ್ರತಿಯನ್ನು 30 ದಿನಗಳವರೆಗೆ ಉಳಿಸಿಕೊಳ್ಳಬಹುದು.
ನೀವು ತಾತ್ಕಾಲಿಕ ಚಾಟ್ ಅನ್ನು ಉಳಿಸಿದರೆ, ಅದು ನಿಮ್ಮ ಇತಿಹಾಸದಲ್ಲಿ ಸಾಮಾನ್ಯ ಚಾಟ್ ಆಗುತ್ತದೆ. ಆಗ ಅದಕ್ಕೆ ನಿಮ್ಮ ಖಾತೆಯ ವೈಯಕ್ತೀಕರಣ ಮತ್ತು ಮಾಡೆಲ್ ಸುಧಾರಣೆ ಸೆಟ್ಟಿಂಗ್‌ಗಳು ಅನ್ವಯಿಸುತ್ತವೆ.
ಹೆಚ್ಚಿನ ಮಾಹಿತಿಗಾಗಿ, ChatGPT ಯಲ್ಲಿನ ತಾತ್ಕಾಲಿಕ ಚಾಟ್ ನೋಡಿ.
ಗ್ರಾಹಕ ಮತ್ತು ವ್ಯಾಪಾರ ಖಾತೆಗಳಲ್ಲಿ ಮಾಡೆಲ್ ಸುಧಾರಣೆ
ChatGPT ಮತ್ತು ವ್ಯಕ್ತಿಗಳಿಗಾಗಿ ಇರುವ ನಮ್ಮ ಇತರ ಸೇವೆಗಳಿಗೆ ಸಲ್ಲಿಸಿದ ವಿಷಯವನ್ನು ಮಾಡೆಲ್ ಕಾರ್ಯಕ್ಷಮತೆ ಸುಧಾರಿಸಲು ನಾವು ಬಳಸಬಹುದು. ಉದಾಹರಣೆಗೆ, ಬಳಕೆದಾರರ ಸೆಟ್ಟಿಂಗ್‌ಗಳನ್ನು ಅವಲಂಬಿಸಿ, ಅವರು ನೀಡಿದ ಸೂಚನೆಗಳು, ಮಾಡೆಲ್‌ನ ಪ್ರತಿಕ್ರಿಯೆಗಳು ಮತ್ತು ಚಿತ್ರಗಳು, ಕಡತಗಳಂತಹ ಇತರ ವಿಷಯವನ್ನು ಮಾಡೆಲ್ ಕಾರ್ಯಕ್ಷಮತೆ ಸುಧಾರಿಸಲು ನಾವು ಬಳಸಬಹುದು.
ಹೆಚ್ಚಿನ ಮಾಹಿತಿಗಾಗಿ, ಮಾಡೆಲ್ ಕಾರ್ಯಕ್ಷಮತೆ ಸುಧಾರಿಸಲು ನಿಮ್ಮ ಡೇಟಾವನ್ನು ಹೇಗೆ ಬಳಸಲಾಗುತ್ತದೆ ನೋಡಿ.
ಪೂರ್ವನಿಯೋಜಿತವಾಗಿ, ChatGPT Business, ಎಂಟರ್‌ಪ್ರೈಸ್, ಎಡ್ಯು ಅಥವಾ ಆರೋಗ್ಯ ರಕ್ಷಣೆಗಾಗಿ ChatGPT ವರ್ಕ್‌ಸ್ಪೇಸ್‌ಗಳಿಂದ ಅಥವಾ API ಪ್ಲ್ಯಾಟ್‌ಫಾರ್ಮ್‌ನಿಂದ ಪಡೆದ ವಿಷಯವನ್ನು ತನ್ನ ಮಾಡೆಲ್‌ಗಳನ್ನು ಸುಧಾರಿಸಲು OpenAI ಬಳಸುವುದಿಲ್ಲ. ಡೇಟಾ ಹಂಚಿಕೊಳ್ಳುವ ಆಯ್ಕೆ ಲಭ್ಯವಿದ್ದಾಗ ಸಂಸ್ಥೆಗಳು ಅದನ್ನು ಆಯ್ಕೆಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, ಎಂಟರ್‌ಪ್ರೈಸ್ ಗೌಪ್ಯತೆ ನೋಡಿ.
ನಿಮ್ಮ ಖಾತೆಯನ್ನು ಅಳಿಸಿ ಮತ್ತು ಇಮೇಲ್ ಅನ್ನು ಮರುಬಳಸಿ
ನಿಮ್ಮ ಖಾತೆಯನ್ನು ಅಳಿಸಿದರೆ, ChatGPT ಮತ್ತು API ಪ್ಲ್ಯಾಟ್‌ಫಾರ್ಮ್ ಸೇರಿದಂತೆ ಆ ಖಾತೆಗೆ ಸಂಬಂಧಿಸಿದ ಸೇವೆಗಳಿಗೆ ಪ್ರವೇಶ ಕಳೆದುಕೊಳ್ಳುತ್ತೀರಿ. ಖಾತೆಯನ್ನು ಕೇವಲ ನಿಷ್ಕ್ರಿಯಗೊಳಿಸದೆ ಸಂಪೂರ್ಣವಾಗಿ ಅಳಿಸಿದ್ದರೆ, 30 ದಿನಗಳ ನಂತರ ಅದೇ ಇಮೇಲ್ ವಿಳಾಸದೊಂದಿಗೆ ಹೊಸ ಖಾತೆಯನ್ನು ರಚಿಸಬಹುದು. ಸೂಚನೆಗಳಿಗಾಗಿ, ನಿಮ್ಮ ChatGPT ಖಾತೆಯನ್ನು ಅಳಿಸುವುದು ನೋಡಿ.
ಮೊಬೈಲ್ ಫೋನ್ ಸಂಖ್ಯೆಯನ್ನು ಮರುಬಳಸಿ
ಒಂದು ಫೋನ್ ಸಂಖ್ಯೆಯನ್ನು ಬಳಸಿ ಗರಿಷ್ಠ 3 ಖಾತೆಗಳ ಮೊದಲ ಎಪಿಐ ಕೀಲಿಯನ್ನು ಪರಿಶೀಲಿಸಬಹುದು. ಖಾತೆಯನ್ನು ಅಳಿಸಿದರೂ ಆ ಎಪಿಐ ಪರಿಶೀಲನೆಯ ಮಿತಿ ಮರುಹೊಂದಿಕೆಯಾಗುವುದಿಲ್ಲ. ಖಾತೆಯನ್ನು ಅಳಿಸಿದ ನಂತರ ಹೊಸ ChatGPT ಖಾತೆಗೆ ಅದೇ ಸಂಖ್ಯೆಯನ್ನು ಮರುಬಳಸಬಹುದೇ ಎಂಬುದಕ್ಕೂ ಈ ಮಿತಿಗೂ ಸಂಬಂಧವಿಲ್ಲ.
ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ, ತಮ್ಮ ChatGPT ಖಾತೆಯನ್ನು ಅಳಿಸಿದ ಗ್ರಾಹಕರು ಅದೇ ಫೋನ್ ಸಂಖ್ಯೆಯನ್ನು ಬಳಸಿ ಮರುನೋಂದಾಯಿಸಲು ನಾವು ಅನುಮತಿಸುತ್ತೇವೆ. ನೀವು ನಿಮ್ಮ ChatGPT ಗ್ರಾಹಕ ಖಾತೆಯನ್ನು ಶಾಶ್ವತವಾಗಿ ಅಳಿಸಿದ್ದರೆ (ಮತ್ತು ನಮ್ಮ ನಿಯಮಗಳು ಅಥವಾ ನೀತಿಗಳ ಉಲ್ಲಂಘನೆಗಾಗಿ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸದಿದ್ದರೆ), 30 ದಿನಗಳ ನಂತರ ನಮ್ಮ ವ್ಯವಸ್ಥೆಯಿಂದ ಫೋನ್ ಸಂಖ್ಯೆಯನ್ನು ತೆಗೆದುಹಾಕುತ್ತೇವೆ. ಅದರ ನಂತರ, ನೀವು ಅದೇ ಸಂಖ್ಯೆಯೊಂದಿಗೆ ಮತ್ತೆ ನೋಂದಾಯಿಸಿಕೊಳ್ಳಬಹುದು.
ಎಪಿಐ ಫೋನ್ ಪರಿಶೀಲನೆ ಮತ್ತು ಸಂಖ್ಯೆಯ ಮರುಬಳಕೆಯ ಕುರಿತು ಹೆಚ್ಚಿನ ಮಾಹಿತಿಗಾಗಿ, ಫೋನ್ ಪರಿಶೀಲನೆಗೆ ಅಗತ್ಯವಿರುವ ಅಂಶಗಳು ನೋಡಿ.
ಅಸ್ತಿತ್ವದಲ್ಲಿರುವ OpenAI ಖಾತೆಯಿಂದ ಫೋನ್ ಸಂಖ್ಯೆಯ ಸಂಪರ್ಕವನ್ನು ತೆಗೆದುಹಾಕಲು ಸಾಧ್ಯವಿಲ್ಲ.
ನಿಮ್ಮ ಚಾಟ್ ಇತಿಹಾಸವನ್ನು ಅಳಿಸಿ
ನಿಮ್ಮ ಚಾಟ್ ಇತಿಹಾಸದಿಂದ ನಿರ್ದಿಷ್ಟ ಸಂಭಾಷಣೆಗಳನ್ನು ಒಂದೊಂದಾಗಿ ಅಳಿಸಬಹುದು ಅಥವಾ ಇಡೀ ಇತಿಹಾಸವನ್ನು ಒಂದೇ ಬಾರಿಗೆ ಅಳಿಸಬಹುದು. ನೀವು ಅಳಿಸಿದ ಚಾಟ್‌ಗಳನ್ನು 30 ದಿನಗಳೊಳಗೆ ನಮ್ಮ ವ್ಯವಸ್ಥೆಗಳಿಂದ ಅಳಿಸಲಾಗುತ್ತದೆ. ಆದರೆ, ಅವುಗಳಲ್ಲಿನ ಗುರುತು ಪತ್ತೆಹಚ್ಚುವ ಮಾಹಿತಿಯನ್ನು ಈಗಾಗಲೇ ತೆಗೆದುಹಾಕಿ, ನಿಮ್ಮ ಖಾತೆಯೊಂದಿಗಿನ ಸಂಬಂಧವನ್ನು ಕಡಿತಗೊಳಿಸಿದ್ದರೆ ಅಥವಾ ಭದ್ರತೆ ಅಥವಾ ಕಾನೂನು ಕಾರಣಗಳಿಗಾಗಿ ಅವುಗಳನ್ನು ಉಳಿಸಿಕೊಳ್ಳಬೇಕಿದ್ದರೆ ಇದು ಅನ್ವಯಿಸುವುದಿಲ್ಲ.
ಸೇವಾ ಪೂರೈಕೆದಾರರೊಂದಿಗೆ ವಿಷಯವನ್ನು ಹೇಗೆ ಹಂಚಿಕೊಳ್ಳಲಾಗುತ್ತದೆ
ನಮ್ಮ ಸೇವೆಗಳನ್ನು ಒದಗಿಸಲು ನೆರವಾಗುವ ಆಯ್ದ ವಿಶ್ವಾಸಾರ್ಹ ಸೇವಾ ಪೂರೈಕೆದಾರರೊಂದಿಗೆ ನಾವು ವಿಷಯವನ್ನು ಹಂಚಿಕೊಳ್ಳುತ್ತೇವೆ. ಈ ಉದ್ದೇಶವನ್ನು ಪೂರೈಸಲು ಅಗತ್ಯವಿರುವ ಕನಿಷ್ಠ ಪ್ರಮಾಣದ ವಿಷಯವನ್ನು ಮಾತ್ರ ನಾವು ಹಂಚಿಕೊಳ್ಳುತ್ತೇವೆ. ನಮ್ಮ ಸೇವಾ ಪೂರೈಕೆದಾರರು ಕಟ್ಟುನಿಟ್ಟಿನ ಗೌಪ್ಯತೆ ಮತ್ತು ಭದ್ರತೆಯ ಬಾಧ್ಯತೆಗಳಿಗೆ ಒಳಪಟ್ಟಿರುತ್ತಾರೆ. ಮಾರುಕಟ್ಟೆ ಪ್ರಚಾರ ಅಥವಾ ಜಾಹೀರಾತಿನ ಉದ್ದೇಶಗಳಿಗಾಗಿ ನಿಮ್ಮ ಚಾಟ್ ವಿಷಯವನ್ನು ನಾವು ಹಂಚಿಕೊಳ್ಳುವುದಿಲ್ಲ. ನಮ್ಮ ಜಾಹೀರಾತು ಪದ್ಧತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ChatGPT ಯಲ್ಲಿನ ಜಾಹೀರಾತುಗಳು ನೋಡಿ.
ಹೆಚ್ಚಿನ ಮಾಹಿತಿಗಾಗಿ, ಪ್ರೈವಸಿ ಪಾಲಿಸಿ ನೋಡಿ.
ವಿಷಯವನ್ನು ಎಲ್ಲಿ ಸಂಗ್ರಹಿಸಲಾಗುತ್ತದೆ
ಅಮೆರಿಕ ಮತ್ತು ವಿಶ್ವದ ವಿವಿಧೆಡೆ ಇರುವ OpenAI ವ್ಯವಸ್ಥೆಗಳು ಹಾಗೂ ನಮ್ಮ ವಿಶ್ವಾಸಾರ್ಹ ಸೇವಾ ಪೂರೈಕೆದಾರರ ವ್ಯವಸ್ಥೆಗಳಲ್ಲಿ ವಿಷಯವನ್ನು ಸಂಗ್ರಹಿಸಲಾಗುತ್ತದೆ. ಡೇಟಾಗೆ ವಿವರಣಾತ್ಮಕ ಗುರುತುಗಳನ್ನು ಸೇರಿಸಲು ಮತ್ತು ಸುರಕ್ಷತೆಯ ಉದ್ದೇಶಗಳಿಗಾಗಿ, ವಿಷಯದ ಆಯ್ದ ಭಾಗಗಳನ್ನು ವಿಶ್ವಾಸಾರ್ಹ ಸೇವಾ ಪೂರೈಕೆದಾರರಿಗೆ ಕಳುಹಿಸಬಹುದು. ಈ ಪೂರೈಕೆದಾರರು ಗೌಪ್ಯತೆ ಮತ್ತು ಭದ್ರತೆಯ ಬಾಧ್ಯತೆಗಳಿಗೆ ಒಳಪಟ್ಟಿರುತ್ತಾರೆ.
ವಿಷಯಕ್ಕೆ ಅಧಿಕೃತ ವ್ಯಕ್ತಿಗಳ ಪ್ರವೇಶ
ಸೀಮಿತ ಸಂಖ್ಯೆಯ ಅಧಿಕೃತ OpenAI ಸಿಬ್ಬಂದಿ ಹಾಗೂ ಗೌಪ್ಯತೆ ಮತ್ತು ಭದ್ರತೆಯ ಬಾಧ್ಯತೆಗಳಿಗೆ ಒಳಪಟ್ಟ ವಿಶ್ವಾಸಾರ್ಹ ಸೇವಾ ಪೂರೈಕೆದಾರರು ಈ ಕಾರಣಗಳಿಗಾಗಿ ಅಗತ್ಯವಿದ್ದಾಗ ಮಾತ್ರ ಬಳಕೆದಾರರ ವಿಷಯವನ್ನು ಪ್ರವೇಶಿಸಬಹುದು: (1) ದುರುಪಯೋಗ ಅಥವಾ ಭದ್ರತಾ ಘಟನೆಯ ತನಿಖೆಗಾಗಿ; (2) ನಿಮ್ಮ ಖಾತೆಯ ಕುರಿತ ಪ್ರಶ್ನೆಗಳೊಂದಿಗೆ ನೀವು ನಮ್ಮನ್ನು ಸಂಪರ್ಕಿಸಿದರೆ ನೆರವು ನೀಡಲು ಅಥವಾ ಉತ್ಪನ್ನದ ಬಳಕೆಯ ಅನುಭವಕ್ಕೆ ಅಡ್ಡಿಯಾಗುವ ಸಮಸ್ಯೆಗಳನ್ನು ಪರಿಹರಿಸಲು; (3) ಕಾನೂನು ವಿಷಯಗಳನ್ನು ನಿರ್ವಹಿಸಲು; ಅಥವಾ (4) ಮಾಡೆಲ್ ಕಾರ್ಯಕ್ಷಮತೆಯನ್ನು ಸುಧಾರಿಸಲು (ನೀವು ಇದರಿಂದ ಹೊರಗುಳಿಯಲು ಆಯ್ಕೆಮಾಡಿದ್ದರೆ ಹೊರತುಪಡಿಸಿ). ವಿಷಯದ ಪ್ರವೇಶವು ತಾಂತ್ರಿಕ ಪ್ರವೇಶ ನಿಯಂತ್ರಣಗಳಿಗೆ ಒಳಪಟ್ಟಿರುತ್ತದೆ ಮತ್ತು ಅದನ್ನು ತಿಳಿದುಕೊಳ್ಳುವ ಅಗತ್ಯವಿರುವ ಅಧಿಕೃತ ಸಿಬ್ಬಂದಿಗೆ ಮಾತ್ರ ಸೀಮಿತವಾಗಿರುತ್ತದೆ. ಇದರ ಜೊತೆಗೆ, ಬಳಕೆದಾರರ ವಿಷಯವನ್ನು ಪ್ರವೇಶಿಸುವ ಪ್ರತಿಯೊಂದು ಸಂದರ್ಭವನ್ನೂ ನಾವು ಮೇಲ್ವಿಚಾರಣೆ ಮಾಡಿ ದಾಖಲಿಸುತ್ತೇವೆ. ಯಾವುದೇ ಬಳಕೆದಾರರ ವಿಷಯವನ್ನು ಪ್ರವೇಶಿಸುವ ಮೊದಲು ಅಧಿಕೃತ ಸಿಬ್ಬಂದಿ ಭದ್ರತೆ ಮತ್ತು ಗೌಪ್ಯತೆಯ ತರಬೇತಿಯನ್ನು ಪಡೆಯಬೇಕು.
ಪರಿಶೀಲನೆಗೆ ಅಥವಾ ಬಳಕೆಗೆ ಒಳಪಡಬಾರದೆಂದು ನೀವು ಬಯಸುವ ಸೂಕ್ಷ್ಮ ಮಾಹಿತಿಯನ್ನು ದಯವಿಟ್ಟು ನಮೂದಿಸಬೇಡಿ.
ಡೇಟಾ ಮಾರಾಟ ಮತ್ತು ಜಾಹೀರಾತುದಾರರ ಪ್ರವೇಶ
OpenAI ನಿಮ್ಮ ಡೇಟಾವನ್ನು ಮಾರಾಟ ಮಾಡುವುದಿಲ್ಲ ಅಥವಾ ನಿಮ್ಮ ChatGPT ಸಂಭಾಷಣೆಗಳನ್ನು ಜಾಹೀರಾತುದಾರರೊಂದಿಗೆ ಹಂಚಿಕೊಳ್ಳುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ, ChatGPT ಯಲ್ಲಿನ ಜಾಹೀರಾತುಗಳು ನೋಡಿ.
ಗೌಪ್ಯತೆ ವಿನಂತಿಯನ್ನು ಸಲ್ಲಿಸಿ
ಪ್ರೈವಸಿ ಪೋರ್ಟಲ್ ಮೂಲಕ ಗೌಪ್ಯತೆ ವಿನಂತಿಯನ್ನು ಸಲ್ಲಿಸಿ ಅಥವಾ dsar@openai.com ಗೆ ಇಮೇಲ್ ಕಳುಹಿಸಿ.
